ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕು ಕುಂದಾಪುರ ಕಸಬಾ ಗ್ರಾಮದಿಂದ ಕಾಪು ತಾಲೂಕು ಹೆಜಮಾಡಿ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿ 66(17) ರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ನೋಟೀಸು ನೀಡಿದರೂ, ಕೆಲವು ಭೂ ಮಾಲಕರು ಈವರೆಗೂ ತಮ್ಮ ಹಕ್ಕಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಿ ಪರಿಹಾರಧನ ಪಡೆದಿರುವುದಿಲ್ಲ.
ಬಾಕಿಯಾದ ಭೂಸ್ವಾಧೀನ ಪ್ರಕರಣಗಳ ಮತ್ತು ಬಾಕಿ ಇರುವ ಪರಿಹಾರ ಹಣದ ಬಗ್ಗೆ ಪಟ್ಟಿ ತಯಾರಿಸಿ, ಸಂಬಂಧಪಟ್ಟ ಗ್ರಾಮಕರಣಿಕರ ಹಾಗೂ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಇರಿಸಲಾಗಿದೆ.
ಜಮೀನು ಕಳೆದುಕೊಂಡು ಪರಿಹಾರ ಪಡೆಯಲು ಬಾಕಿ ಇರುವ ಸಂತ್ರಸ್ತರು ಸಂಬಂಧಪಟ್ಟ ಗ್ರಾಮ ಕರಣಿಕರಿಂದ ಮಾಹಿತಿ ಪಡೆದು 30 ದಿನಗಳ ಒಳಗೆ ಅಗತ್ಯವುಳ್ಳ ದಾಖಲೆಗಳೊಂದಿಗೆ ಕುಂದಾಪುರ ಸಕ್ರಮ ಪ್ರಾಧಿಕಾರಿಯವರು ರಾ.ಹೆ(17) ಹಾಗೂ ಸಹಾಯಕ ಕಮೀಷನರ್ ಕಚೇರಿಗೆ ಕೋರಿಕೆ ಅರ್ಜಿ ಸಲ್ಲಿಸಿ, ಪರಿಹಾರ ಹಣ ಪಡೆಯುವಂತೆ ಕುಂದಾಪುರ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.