ಉಡುಪಿ: ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗಗಳಲ್ಲಿ ಮೇ 16 ರಿಂದ (ಇಂದು) ಮೇ 21ರ ವರೆಗೆ ಗುಡುಗು ಸಹಿತ ಭಾರಿ ಮಳೆಯಾಗಲಿದ್ದು ಯಲ್ಲೋ, ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮೇ 17 ರಿಂದ 18 ರ ವರೆಗೆ 65 ರಿಂದ 115 ಮಿಮಿ ಮಳೆಯಾಗಲಿದೆ. ಮೇ 18 ರಂದು ಕರಾವಳಿಯ ಹಲವೆಡೆ 115 ಮಿಮೀಕ್ಕಿಂತ ಹೆಚ್ಚು ಮಳೆಯಾಗಲಿದೆ. ಮೇ 19 ರಂದು 205 ಮಿಮೀಕ್ಕಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಲಿದೆ.
