ಮಂಗಳೂರು: ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ಎನೆಪೋಯಾ ನಗರ ಆರೋಗ್ಯ ತರಬೇತಿ ಕೇಂದ್ರ, ಮಂಗಳೂರು ಮಹಾನಗರ ಪಾಲಿಕೆ ಮತ್ತು ತುಳುವೆರೆ ಕೂಟ (ರಿ.) ತುಳುವ ಚಾವಡಿ ಶಕ್ತಿನಗರ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವು ಮಂಗಳೂರು ಶಕ್ತಿನಗರದ ತುಳುವೆರೆ ಕೂಟ ತುಳುವ ಚಾವಡಿ ಸಭಾಂಗಣದಲ್ಲಿ ನಡೆಯಿತು
ಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಎಸ್. ಸುಧಾಕರ್ ಜೋಗಿ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಆರೋಗ್ಯವಂತ ಜೀವನಶೈಲಿ ಮೈಗೂಡಿಸಿಕೊಂಡರೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ನಡುವೆ ಸಮತೋಲನ ಕಾಪಾಡಿಕೊಳ್ಳಬಹುದು. ತನ್ಮೂಲಕ ಬಲಿಷ್ಠ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಇಂತಹ ಶಿಬಿರಗಳು ಗ್ರಾಮಸ್ಥರ ಆರೋಗ್ಯ ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಸಮಾಜಕಾರ್ಯ ವಿಭಾಗ ಮುಖ್ಯಸ್ಥರಾದ ಅರುಣಾ ಕುಮಾರಿ ಮಾತನಾಡುತ್ತಾ, ಜನರು ಆರೋಗ್ಯ ರಕ್ಷಣೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಎನೆಪೋಯಾ ನಗರ ಆರೋಗ್ಯ ತರಬೇತಿ ಕೇಂದ್ರ ಮೆಡಿಕಲ್ ಆಫೀಸರ್ ಡಾ. ಅನುಶ್ರೀ, , ಎನೆಪೋಯಾ ನಗರ ಆರೋಗ್ಯ ತರಬೇತಿ ಕೇಂದ್ರದ ಅಫೀಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಥಮ ವರ್ಷದ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳಾದ ರಕ್ಷಾ ಎಂ ಸ್ವಾಗತಿಸಿ, ಸುಮಿತ್ರಾ ವಂದಿಸಿದರು. ವಿನೀತ್ ಎ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಗ್ರಾಮಸ್ಥರು ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದರು.