ಹೆಬ್ರಿ: ಶಾಂತಿನಿಕೇತನ ಯುವ ವೃಂದ ಮತ್ತು ಶ್ರೀ ವಿನಾಯಕ ಗೆಳೆಯರ ಬಳಗ ಕುಚ್ಚೂರು ಇವರ ಜಂಟಿ ಆಶ್ರಯದಲ್ಲಿ ಹಾಗೂ ಆದರ್ಶ ಆಸ್ಪತ್ರೆ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ ಮತ್ತು ಸರ್ಕಾರಿ ಆಸ್ಪತ್ರೆ ಅಜ್ಜರಕಾಡು ಇವರ ಸಹಭಾಗಿತ್ವದಲ್ಲಿ ಹೆಬ್ರಿಯ ಕುಚ್ಚೂರು 1 ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ, ಉಚಿತ ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು.
ವಾದಿರಾಜ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ನಾವು ಉತ್ತಮವಾದ ಆರೋಗ್ಯ ಹೊಂದಿದ್ದರೆ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಇಂತಹ ಗ್ರಾಮೀಣ ಪ್ರದೇಶದಲ್ಲಿ ಉಚಿತವಾಗಿ ಆರೋಗ್ಯ, ನೇತ್ರ ತಪಾಸಣಾ ಶಿಬಿರ ಆಯೋಜಿಸಿದ ಶಾಂತಿನಿಕೇತನ ಯುವ ವೃಂದ ಮತ್ತು ಶ್ರೀ ವಿನಾಯಕ ಗೆಳೆಯರ ಬಳಗ ಕುಚ್ಚೂರು ಇವರ ಸಮಾಜಮುಖಿ ಚಟುವಟಿಕೆ ಶ್ಲಾಘನೀಯ.
ಜಿಲ್ಲಾ ರಾಜೋತ್ಸವ, ಜಿಲ್ಲಾ ಅತ್ಯುತ್ತಮ ಸಂಘ ಪ್ರಶಸ್ತಿ ಪಡೆದ ಶಾಂತಿನಿಕೇತನ ಯುವ ವೃಂದದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದರು. ಆದರ್ಶ ಆಸ್ಪತ್ರೆಯ ವೈದ್ಯರಾದ ಡಾ. ಉದಯ ಕುಮಾರ್ ಪ್ರಭು ಉತ್ತಮ ಆರೋಗ್ಯದ ಹೊಂದುವ ಬಗ್ಗೆ ಸಲಹೆ ನೀಡಿದರು.
ರೇವತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ತಾ.ಪಂ. ಸದಸ್ಯ ಅಮೃತ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ನಿತ್ಯಾನಂದ ಶೆಟ್ಟಿ, ದಯಾನಂದ ಪೂಜಾರಿ, ರಕ್ತ ನಿಧಿ ಘಟಕದ ಡಾ. ವೀಣಾ, ಅಜ್ಜರಕಾಡು ಆಸ್ಪತ್ರೆಯ ವೈದ್ಯರು, ಪ್ರಸಾದ್ ನೇತ್ರಲಯದ ಡಾ. ನಿಯೋಮಿ, ಗ್ರಾ. ಪಂ. ಸದಸ್ಯರಾದ ಮಹೇಶ್ ಶೆಟ್ಟಿ, ಸುಜಾತಾ, ಶಾಂತಿನಿಕೇತನದ ಅಧ್ಯಕ್ಷ ರಾಜೇಶ್, ಉಪಾಧ್ಯಕ್ಷ ರವೀಶ್ ಶೆಟ್ಟಿ, ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣ ಪೂಜಾರಿ ಉಪಸ್ಥಿತರಿದ್ದರು. ಸೌಜನ್ಯ, ಚೈತನ್ಯ, ನಿತಿನ್, ಚೇತನ್ ಪ್ರಾರ್ಥನೆ ನೆರವೇರಿಸಿದರು. ಪಂಚಾಯತ್ ಸದ್ಯಸರಾದ ಸತೀಶ್ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಶೆಟ್ಟಿ ನಿರೂಪಿಸಿದರು.
ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ನಮನ ಸಲ್ಲಿಸಲಾಯಿತು. ಶಿಬಿರದಲ್ಲಿ ಒಟ್ಟು 82 ಯೂನಿಟ್ ರಕ್ತ ಸಂಗ್ರಹವಾಯಿತು. ಕಳೆದ ವರ್ಷ 105 ಸದಸ್ಯರು ನೇತ್ರದಾನ ಮಾಡಿ ನೇತ್ರದಾನ ಜಾಗೃತಿ ಮಾಡುತ್ತಿರುವ ಶಾಂತಿನಿಕೇತನ ಯುವ ವೃಂದ ಇಂದು ಅದರ ಬಗ್ಗೆ ಅರಿವು ಮೂಡಿಸಲಾಯಿತು.
ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಪೂಜಾರಿ, ಶಾಂತಿನಿಕೇತನ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಕುಚ್ಚೂರು, ಜಯಕರ್, ದಿಕ್ಷೀತ್, ವಿಘ್ನೇಶ, ರಾಜೇಶ್ ನಾಯಕ್ ಹೆಬ್ರಿ ಇವರು ನೇತ್ರದಾನ ಕರಾರು ಪತ್ರಕ್ಕೆ ಸಹಿ ಹಾಕಿದರು.