ಕಾಪು: ಇತಿಹಾಸ ಪ್ರಸಿದ್ಧ ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಹಯಗ್ರೀವ ಜಯಂತಿ ಕಾರ್ಯಕ್ರಮ ಜರಗಿತು. ಶ್ರೀ ದೇವರ ಸಿಂಹಾಸನದಲ್ಲಿ ವಿಶೇಷವಾಗಿ ಆರಾಧನೆಗೊಳ್ಳುವ ವೇದ ವಿದ್ಯಾಜ್ಞಾನ ಅಭಯ ಪ್ರಧಾತ ಶ್ರೀ ಹಯಗ್ರೀವ ದೇವರ ಪ್ರೀತ್ಯರ್ಥ ವಿಶೇಷ ಹಯಗ್ರೀವ ಮಡ್ಡಿ ನೈವೇದ್ಯ ಸಹಿತ ಮಹಾಪೂಜೆ ಜರಗಿತು.
ಹಯಗ್ರೀವ ಸಹಿತ ಲಕ್ಷ್ಮೀ ವೆಂಕಟರಮಣ ದೇವರ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ವಿದ್ಯಾರಂಭ ಸೇವೆ ಪ್ರಾರಂಭಿಸಲಾಯಿತು.
ದೇವಳಕ್ಕೆ ಭೇಟಿ ನೀಡಿದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು ಇವರನ್ನು ದೇವಳದ ವತಿಯಿಂದ ಗೌರವಿಸಲಾಯಿತು.
ದೇವಳದ ಆಡಳಿತ ಮೊಕ್ತೇಸರ ಪ್ರಸಾದ್ ಜಿ ಶೆಣೈ, ಮೊಕ್ತೇಸರರಾದ ರಾಮ್ ನಾಯಕ್, ರಾಜೇಶ್ ಶೆಣೈ, ಕೃಷ್ಣಾನಂದ ನಾಯಕ್, ಚಂದ್ರಕಾಂತ್ ಕಾಮತ್, ದೇವಳದ ಅರ್ಚಕ ವೇ.ಮೂ ಕಮಲಾಕ್ಷ ಭಟ್ ಮುಂತಾದವರು ಉಪಸ್ಥಿತರಿದ್ದರು.