ಮಂಗಳೂರು: ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆಯಿಂದ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕಾಟಿಪಳ್ಳ ವಾರ್ಡ್ 3 ರಲ್ಲಿ ರೂ. 40 ಲಕ್ಷದ ಕಾಮಗಾರಿಗೆ ಗುದ್ದಲಿಪೂಜೆ ನಡೆಯಿತು. ಶಾಸಕ ಡಾ.ಭರತ್ ಶೆಟ್ಟಿ ಮತ್ತು ಮಹಾನಗರ ಪಾಲಿಕೆ ಸದಸ್ಯ ಲೋಕೇಶ್ ಬೊಳ್ಳಾಜೆ ಗುದ್ದಲಿಪೂಜೆ ನೆರವೇರಿಸಿದರು.
ಭಾಸ್ಕರ್ ದೇವಾಡಿಗ, ಮಂಡಲ ಸದಸ್ಯ ಜಯಕುಮಾರ್ ಗಣೇಶಪುರ, ಮಂಡಲ ಕಾರ್ಯದರ್ಶಿ ರಾಘವೇಂದ್ರ ಶೆಣೈ, ಮಹಾ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ದಿನಕರ್ ಇಡ್ಯಾ, ಮಹಿಳಾ ಮೋರ್ಚಾ ಕಾರ್ಯದರ್ಶಿ ಶೈಲಜಾ, ಬೂತ್ ಅಧ್ಯಕ್ಷ ಗಿರಿಧರ್ ಶೆಟ್ಟಿ, ಹೊನ್ನಯ ಕೋಟ್ಯಾನ್, ತಿಲಕ್, ಗಣೇಶ್ ಕಟ್ಟೆ, ವಿಕಾಸ್, ಉಮೇಶ್ ಶೆಟ್ಟಿಗಾರ್, ಸುನಿಲ್ ಪ್ರಭು, ಸಪ್ನಾ, ದೇವಿ ಪ್ರಸಾದ್, ಅನಿಲ್, ಜೋಸೆಫ್, ಸಿರಿಲ್, ಮನೋಜ್ ಬೊಳ್ಳಾಜೆ ಉಪಸ್ಥಿತರಿದ್ದರು.