Sunday, November 24, 2024
Sunday, November 24, 2024

ವರ್ಣರಂಜಿತ, ಜನಸಾಗರದ ನಡುವೆ ಅಭೂತಪೂರ್ವ ಜಿಪಿಎಲ್ ಸಂಪನ್ನ

ವರ್ಣರಂಜಿತ, ಜನಸಾಗರದ ನಡುವೆ ಅಭೂತಪೂರ್ವ ಜಿಪಿಎಲ್ ಸಂಪನ್ನ

Date:

ಮಂಗಳೂರು: ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಆಯೋಜಿಸುವ ಫುಜ್ಲಾನಾ ಜಿಪಿಎಲ್ 2022 ನೇತ್ರಾವತಿ ನದಿ ತೀರದಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ಸಿನಲ್ಲಿ ವರ್ಣರಂಜಿತವಾಗಿ ಕೊನೆಗೊಂಡಿದೆ.

ಒಟ್ಟು 3 ದಿನಗಳ ತನಕ ನಡೆದ ರಾಷ್ಟ್ರದ ವಿವಿಧ ರಾಜ್ಯಗಳ 16 ತಂಡಗಳು ಭಾಗವಹಿಸಿದ ಕ್ರಿಕೆಟ್ ಪಂದ್ಯಾವಳಿಯನ್ನು ಶನಿವಾರ ದಕ್ಷಿಣ ಕನ್ನಡ ಸಂಸದರೂ, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರೂ ಆದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿದರು.

ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಹಿತ ರಾಜ್ಯ, ದೇಶದ ವಿವಿಧ ಕ್ಷೇತ್ರಗಳ ಗಣ್ಯರು ಉದ್ಘಾಟನೆಗೆ ಸಾಕ್ಷಿಯಾದರು. ಮಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಹೆಲಿಕಾಪ್ಟರ್ ರೈಡ್ ಮೂಲಕ ನೂರಾರು ಜನರು ಮಂಗಳೂರಿನ ಸೌಂದರ್ಯವನ್ನು ಬೆರಗುಗಣ್ಣಿನಲ್ಲಿ ನೋಡುವ ಅವಕಾಶವನ್ನು ಜಿಪಿಎಲ್ ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ ಹಾಗೂ ಅವರ ತಂಡ ಕಲ್ಪಿಸಿತ್ತು.

ಸಹ್ಯಾದ್ರಿ ಕಾಲೇಜಿನ ಹೊರಮೈದಾನದಲ್ಲಿ ವಿಶೇಷ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿತ್ತು. ಅತಿಥಿಗಳು ಆಗಸದಲ್ಲಿ ಸಂಭ್ರಮಿಸುವುದು ಒಂದು ಕಡೆಯಾದರೆ ಇನ್ನೊಂದೆಡೆ ನದಿಯಲ್ಲಿ ಬೋಟಿಂಗ್ ಮಾಡುವ ಅನುಭವವೇ ಬೇರೆಯಾಗಿತ್ತು.

ಪ್ಲೈ ಬೋರ್ಡ್ ಎನ್ನುವ ವಿನೂತನ ರೀತಿಯ ಸಾಹಸಮಯ ಜಲಕ್ರೀಡೆಯನ್ನು ಜನರು ನೋಡಿ ಖುಷಿಪಟ್ಟರು. ಅದಲ್ಲದೆ ಫ್ಯಾಮಿಲಿ ಬೋಟಿಂಗ್, ಸ್ಪೀಡ್ ಬೋಟ್ ಸಹಿತ ಇನ್ನಿತರ ಬೋಟ್ ಗಳಲ್ಲಿ ಕುಳಿತು ಜನರು ಆನಂದ ಅನುಭವಿಸಿದರು.

ಮಕ್ಕಳಿಗಾಗಿ ವಿಶೇಷವಾಗಿ ನಿರ್ಮಿಸಿದ ಕಿಡ್ಸ್ ಝೋನ್ ನಲ್ಲಿ ವಿವಿಧ ಆಟಗಳಾದ ಸ್ಕೈ ಹೈ ಹಾಗೂ ಇನ್ನಿತರ ಆಟಗಳನ್ನು ಆಡಿ ಪುಟಾಣಿಗಳು ಸಂತೋಷದಲ್ಲಿ ತೇಲಾಡಿದರು. ಮಹಿಳೆಯರಿಗಾಗಿ ಮೆಹಂದಿ, ರಂಗೋಲಿ, ಕೊಟ್ಟಿಗೆ ತಯಾರಿ, ಆಹಾರ ತಯಾರಿ ಸ್ಪರ್ಧೆ ಸಹಿತ ಅನೇಕ ಕ್ರಿಯಾತ್ಮಕ ಸ್ಪರ್ಧೆಗಳು ನಡೆದರೆ, ತಮ್ಮ ಕಲೆ, ಕೌಶಲ್ಯಗಳನ್ನು ನೆರೆದ ಸಾವಿರಾರು ಅತಿಥಿಗಳ ಮುಂದೆ ಪ್ರದರ್ಶಿಸಲು ಪ್ರತಿಭಾವಂತರಿಗೆ ಪ್ರತ್ಯೇಕ ವೇದಿಕೆ ನಿರ್ಮಾಣವಾಗಿತ್ತು.

ಜಿಪಿಎಲ್ ಪ್ರಮುಖ ಆಕರ್ಷಣೆಯಾದ ಫುಟ್ ಕೋರ್ಟ್ ಈ ಬಾರಿಯೂ ವೈವಿಧ್ಯಮಯ ಆಹಾರ ತಯಾರಿಕೆ ಮತ್ತು ಉಣಬಡಿಸುವಲ್ಲಿ ಸದಾ ಮುಂದೆ ಇತ್ತು. ಸುಮಾರು 50 ಸಾವಿರದಷ್ಟು ಜನರು ಮೂರು ದಿನಗಳ ಕಾಲ ಬೆಳಿಗ್ಗೆಯಿಂದ ಮಧ್ಯರಾತ್ರಿಯ ತನಕ ಬಾಯಲ್ಲಿ ನೀರೂರಿಸುವ ವಿವಿಧ ಬಗೆಯ ಶುದ್ಧ ಸಸ್ಯಹಾರಿ ಆಹಾರಗಳನ್ನು ಸವಿದು ಉದರಕ್ಕೂ ಸಂತೃಪ್ತಿ ನೀಡಿದರು.

ಸಹ್ಯಾದ್ರಿ ಕಾಲೇಜಿನ ಐದು ಕಡೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ವಾಹನಗಳು ಅಚ್ಚುಕಟ್ಟಾಗಿ ಪಾರ್ಕ್ ಮಾಡಿ ಅತಿಥಿಗಳ ಆಗಮನ ಮತ್ತು ನಿರ್ಗಮನಕ್ಕೆ ಯಾವುದೇ ತೊಂದರೆ ಆಗದಂತೆ ಆಯೋಜಕರು ನೋಡಿಕೊಂಡರು.

ಗೃಹ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಲಾಗಿದ್ದು, ಅನೇಕ ಕಿರು ಉದ್ಯಮಿಗಳು ಉತ್ತಮ ವ್ಯಾಪಾರ ಮಾಡಿ ಆರ್ಥಿಕ ಚೈತನ್ಯವನ್ನು ಪಡೆದುಕೊಳ್ಳುವ ಸಂಪ್ರದಾಯ ಈ ಬಾರಿಯೂ ಮುಂದುವರೆದಿತ್ತು. ಭಾನುವಾರ ರಾತ್ರಿ ಅಂತಿಮ ಪಂದ್ಯಾಟ ನಡೆದಿದ್ದು, ಪದ್ಮಶ್ರೀ ಮೋಹನದಾಸ್ ಪೈ ಅವರಿಗೆ ಈ ವರ್ಷದ ಜಿಎಸ್ ಬಿ ಮ್ಯಾನ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಮಹಾರಾಷ್ಟ್ರದ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಗೆಲುವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಉತ್ತಮ...
error: Content is protected !!