ಬ್ರಹ್ಮಾವರ: ಗೋವಿಗಾಗಿ ಮೇವು ಅಭಿಯಾನಕ್ಕೆ ಬೆಂಬಲವಾಗಿ ಸಮ್ರದ್ದಿ ಮಹಿಳಾ ಮಂಡಳಿ ಪೇತ್ರಿ ,ಶಿವಾನಿ ವಿಪ್ರ ಮಹಿಳಾ ಮಂಡಳಿ ಸೂರಾಲು, ಗೆಳೆಯರ ಬಳಗ ಕನ್ನಾರು ಇವರ ನೇತೃತ್ವದಲ್ಲಿ ಹುಲ್ಲನ್ನು ಕಟಾವು ಮಾಡಿ ಅರೂರು ಪುಣ್ಯಕೋಟಿ ಗೋಶಾಲೆಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗೋವಿಗಾಗಿ ಮೇವು ಸ್ಥಾಪಕ ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಜಿಲ್ಲೆಯಲ್ಲಿ ಗೊವಿಗಾಗಿ ಮೇವು ಕೇವಲ ಒಂದು ಅಭಿಯಾನವಲ್ಲ. ಇದೊಂದು ಯುವ ಸಮುದಾಯದ ಆಂದೋಲನವಾಗಲಿದೆ ಎಂದರು.
ಸಮ್ರದ್ದಿ ಮಹಿಳಾ ಮಂಡಳಿಯ ಪ್ರಸನ್ನ ಪಿ ಭಟ್ ಮಾತನಾಡಿ, ಗೋವಿಗಾಗಿ ಮೇವು ನಮ್ಮಂತ ಅದೆಷ್ಠೋ ಮಹಿಳೆಯರಿಗೆ ಪ್ರೇರಣೆ. ಜಿಲ್ಲೆಯ ಎಲ್ಲಾ ಮಹಿಳಾ ಸಂಘಟನೆಗಳು ಗೋಮಾತೆಯ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದರು.
ಅರೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಗಣೇಶ್ ಕುಲಾಲ್, ಸಮ್ರದ್ದಿ ಮಹಿಳಾ ಮಂಡಳಿ ಪೇತ್ರಿ ಚೇರ್ಕಾಡಿ, ಶಿವಾನಿ ವಿಪ್ರ ಮಹಿಳಾ ಮಂಡಳಿ ಸೂರಾಲು, ಗೆಳೆಯರ ಬಳಗ ಕನ್ನಾರು, ಪು.ಕೋ.ಗೋ. ಭಕ್ತಿ ಭೂಷಣ ದಾಸ್, ಸಹನಾ ಕೆ ಹಬ್ಬಾರ್, ಮಲ್ಲಿಕಾ ಹರೀಶ್ ಶೆಟ್ಟಿ ಚೇರ್ಕಾಡಿ, ಹರಿದಾಸ ಠಾಕೂರ್, ಶೇಖರ ಕುಲಾಲ, ಸುಧೀರ್ ಕುಂದರ್ ಮುಂತಾದವರು ಉಪಸ್ಥಿತರಿದ್ದರು.