ಸಾಲಿಗ್ರಾಮ: ಪೇಜಾವರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಗೋವಿಗಾಗಿ ಮೇವು ಅಭಿಯಾನದ ಭಾಗವಾಗಿ ಆದಿತ್ಯವಾರ ಸಾಲಿಗ್ರಾಮದ ಚೇಂಪಿ ಲಕ್ಮೀ ವೆಂಕಟರಮಣ ದೇವಸ್ಥಾನದ ಸುತ್ತಮುತ್ತಲಿನ ಪರಿಸರದಲ್ಲಿ ಬೆಳೆದ ಹಸಿ ಹುಲ್ಲನ್ನು ಕಟಾವು ಮಾಡಿ ಕ್ರಷ್ಣಮೂರ್ತಿ ಮರಕಾಲ, ಕ್ರಷ್ಣ ಆಚಾರ್ಯ ಇವರುಗಳ ನೇತೃತ್ವದಲ್ಲಿ ಸಾಲಿಗ್ರಾಮ ಸ್ವಿಮಿಂಗ್ ಕ್ಲಬ್ ಹಾಗೂ ಪಾಂಚಜನ್ಯ ಸಂಘ(ರಿ) ಅಂಬಾಗಿಲುಕೆರೆ ಸಾಲಿಗ್ರಾಮ ಇವರ ಆಶ್ರಯದಲ್ಲಿ ನಡೆದ ಗೋವಿಗಾಗಿ ಮೇವು ಅಭಿಯಾನವನ್ನು ಜಿ.ಎಸ್ .ಬಿ ಮಹಿಳಾ ಸಂಘದ ಕಾರ್ಯಕರ್ತೆಯರು ಗೋಪೂಜೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಾಲಿಗ್ರಾಮ ಸ್ವಿಮಿಂಗ್ ಕ್ಲಬ್ ನ ಅಧ್ಯಕ್ಷರಾದ ಅನಂತ ಶ್ಯಾನುಭಾಗ್ ಮಾತನಾಡಿ, ರಸ್ತೆ ಬದಿ ಇರುವ ಹುಲ್ಲನ್ನು ಸಂಘ ಸಂಸ್ಥೆಗಳ ಮೂಲಕ ಕಟಾವು ಮಾಡಿ ಗೋಶಾಲೆಗೆ ನೀಡುವ ಕಾರ್ಯಕ್ರಮ ದೇಶದಲ್ಲೇ ಮಾದರಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೋವಿಗಾಗಿ ಮೇವು ಸ್ಥಾಪಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸಾಲಿಗ್ರಾಮದ ಜಿ.ಎಸ್ .ಬಿ ಸಮುದಾಯದ ಹಿರಿಯರು ಗೋವಿಗಾಗಿ ಮೇವು ಕಾರ್ಯಕ್ರಮದಲ್ಲಿ ಭಾಗಿಯಾಗಿ ಹುಲ್ಲನ್ನು ಕಟಾವು ಮಾಡಿ ಗೋಸೇವೆ ಮಾಡಿರುವುದು ಗೋವಿಗಾಗಿ ಮೇವು ಕಾರ್ಯಕ್ರಮಕ್ಕೆ ಆನೆಬಲ ಬಂದಿದೆ ಎಂದರು.
ಸ್ವಿಮಿಂಗ್ ಕ್ಲಬ್ ಉಪಾಧ್ಯಕ್ಷರಾದ ನಿತ್ಯಾನಂದ ಶ್ಯಾನುಭಾಗ್, ಕಾರ್ಯದರ್ಶಿ ಮನೋಹರ್ ಭಟ್, ಸಮರ್ಪಣ (ರಿ) ಕೋಟ ಇದರ ಅಧ್ಯಕ್ಷರಾದ ಮಾಧವ ಪೂಜಾರಿ, ಗೋವಿಗಾಗಿ ಮೇವು ಕೋಟ ವಲಯದ ಅಧ್ಯಕ್ಷರಾದ ಪ್ರದೀಪ್ ಪೂಜಾರಿ, ಗೋವಿಗಾಗಿ ಮೇವು ಮಹಿಳಾ ಅಧ್ಯಕ್ಷರಾದ ವಿದ್ಯಾ ಸಾಲ್ಯಾನ್, ಪಟ್ಟಣ ಪಂಚಾಯತ್ ಸದಸ್ಯ ಸಂಜೀವ ದೇವಾಡಿಗ, ವಿಶ್ವಕರ್ಮ ಸಂಘ ಚೇಂಪಿ ಇದರ ಅಧ್ಯಕ್ಷರಾದ ಜನಾರ್ದನ ಆಚಾರ್ಯ, ವಸಂತಿ ಹಂದಟ್ಟು, ವೆಂಕಟೇಶ ಭಟ್, ನಾಗೇಶ ಶ್ಯಾನುಭಾಗ್, ಮುರುಳಿಧರ ಪೈ, ರವೀಂದ್ರ ಶ್ಯಾನುಭಾಗ್, ಕೇಶವ ಶ್ಯಾನುಭಾಗ್, ವಾಸುದೇವ ಕಾರಂತ, ಗಿರಿಯ ಪೂಜಾರಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ವೆಂಕಟೇಶ ಭಟ್ ವಂದಿಸಿದರು.