ಮಣಿಪಾಲ: ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಅಕ್ಟೋಬರ್ 11 ರಂದು ಆಚರಿಸಲಾಗುತ್ತದೆ ಮತ್ತು ಇದನ್ನು ಪ್ರಪಂಚದಾದ್ಯಂತ ಹೆಣ್ಣು ಮಕ್ಕಳ ಬೆಳವಣಿಗೆಗೆ ಸಮರ್ಪಿಸಲಾಗಿದೆ. ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ 2021: ಈ ವರ್ಷದ ಥೀಮ್ “ಡಿಜಿಟಲ್ ಪೀಳಿಗೆ. ನಮ್ಮ ಪೀಳಿಗೆ.” ಇದರ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ, ಅಕ್ಟೋಬರ್ 11 ರಂದು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಹೆಣ್ಣು ಶಿಶುಗಳಿಗೆ ಗೌರವ ನೀಡುವ ಮೂಲಕ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಲಾಯಿತು.
ನವಜಾತ ಹೆಣ್ಣು ಮಗುವನ್ನು ಗೌರವಿಸಿ ಮಾತನಾಡಿದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟ ಅವರು, ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ಮುಖ್ಯ ಉದ್ದೇಶ, ಸರಿಯಾದ ಶಿಕ್ಷಣ, ಆರೋಗ್ಯ, ಮತ್ತು ಯುವತಿಯರು ಮತ್ತು ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡುವುದು ಆಗಿದೆ. ಅವರು ಲಿಂಗ-ಪಕ್ಷಪಾತದ ಹಿಂಸೆ ಮತ್ತು ತಾರತಮ್ಯದಿಂದ ಸುರಕ್ಷಿತವಾಗಿರಬೇಕು. ಮಹಿಳೆಯರು ಮತ್ತು ಹುಡುಗಿಯರು ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತಾರೆ ಮತ್ತು ಅವರ ಅಭಿವೃದ್ಧಿಯನ್ನು ವೇಗಗೊಳಿಸಲು ಇದು ನಿರ್ಣಾಯಕವಾಗಿದೆ ಎಂದರು.