ಉಡುಪಿ, ಮಾ.3: ತೈವಾನ್ ದೇಶದಲ್ಲಿ ಮಾರ್ಚ್ 7 ರಿಂದ 9 ರವರೆಗೆ ನಡೆಯಲಿರುವ ವರ್ಡ್ ಕ್ಯಾಂಪ್ ನಲ್ಲಿ ಕರಾವಳಿ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ಫೋರ್ತ್ ಫೋಕಸ್ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕ ಕುಂದಾಪುರದ ವಿ. ಗೌತಮ್ ನಾವಡ ಭಾಗವಹಿಸಲಿದ್ದಾರೆ.
ವರ್ಡ್ ಕ್ಯಾಂಪ್‌ಗಳು ಸ್ವಯಂಸೇವಕ-ಸಂಘಟಿತ ಮತ್ತು ಫೌಂಡೇಶನ್ ಅನುಮೋದಿತ ಸಮ್ಮೇಳನಗಳಾಗಿವೆ. 2006 ರಿಂದ ವರ್ಡ್ಪ್ರೆಸ್ ಸಮುದಾಯದ ಸದಸ್ಯರು 382 ನಗರಗಳು, 65 ದೇಶಗಳು ಮತ್ತು 6 ಖಂಡಗಳಲ್ಲಿ ಒಟ್ಟು 1,145 ವರ್ಡ್ ಕ್ಯಾಂಪ್‌ಗಳನ್ನು ಆಯೋಜಿಸಿದ್ದಾರೆ. ವರ್ಡ್‌ಕ್ಯಾಂಪ್ ಏಷ್ಯಾ, ವಿಶ್ವದ 3 ಪ್ರಮುಖ ವರ್ಡ್‌ಕ್ಯಾಂಪ್‌ಗಳಲ್ಲಿ ಒಂದಾಗಿದ್ದು, ವರ್ಡ್‌ಪ್ರೆಸ್ ಸಮುದಾಯದಿಂದ ಆಯೋಜಿಸಲಾದ ಅತಿದೊಡ್ಡ ಕೂಟಗಳನ್ನು ಪ್ರತಿನಿಧಿಸುತ್ತದೆ. ಇತ್ತೀಚಿನ ವರ್ಡ್ಪ್ರೆಸ್ ತಂತ್ರಜ್ಞಾನಗಳನ್ನು ಕಲಿಯಲು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಅವಕಾಶಗಳನ್ನು ಒದಗಿಸುವುದರ ಜೊತೆಗೆ, ಭಾಗವಹಿಸುವವರಿಗೆ ದೀರ್ಘಕಾಲೀನ ನೆಟ್‌ವರ್ಕ್‌ಗಳನ್ನು ಸ್ಥಾಪಿಸಲು ಮತ್ತು ವ್ಯಾಪಾರದ ಅವಕಾಶಗಳನ್ನು ಅನ್ವೇಷಿಸಲು ಈ ಸಮ್ಮೇಳನ ಅನುವು ಮಾಡಿಕೊಡುತ್ತದೆ. ವರ್ಡ್ ಕ್ಯಾಂಪ್ ಏಷಿಯಾ 2024 ಸುಮಾರು 2,000 ಮಂದಿ ಭಾಗವಹಿಸಲಿದ್ದಾರೆ. 2024 ರ ಮಾರ್ಚ್ 7 ರಿಂದ 9 ರವರೆಗೆ ತೈಪೆ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ೭೦ಕ್ಕೂ ಹೆಚ್ಚು ದೇಶಗಳಿಂದ 2000 ಮಂದಿ ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ೫೦ಕ್ಕಿಂತ ಹೆಚ್ಚಿನ ಸಂಪನ್ಮೂಲ ವ್ಯಕ್ತಿಗಳು ಮಾತನಾಡಲಿದ್ದಾರೆ.
ಫೋರ್ತ್ ಫೋಕಸ್ ಕುರಿತು: 2012 ರಲ್ಲಿ ಪ್ರಾರಂಭವಾಗಿ ಮತ್ತು 2015 ರಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಫೋರ್ತ್ ಫೋಕಸ್ ಸಂಸ್ಥೆ, ಭಾರತದಲ್ಲಿ ಪ್ರಮುಖ ವೆಬ್ ಸೈಟ್ ವಿನ್ಯಾಸ ಮತ್ತು ಡೆವಲಪರ್ ಸಂಸ್ಥೆಯಾಗಿ ಪ್ರಖ್ಯಾತಿ ಪಡೆದಿದೆ. ಫೋರ್ತ್ ಫೋಕಸ್ ನಲ್ಲಿ ನಾವೀನ್ಯತೆ, ಸೃಜನಶೀಲತೆ ಮತ್ತು ಸಾಟಿಯಿಲ್ಲದ ಪರಿಣತಿಯ ಬಗ್ಗೆ ಗ್ರಾಹಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.