ಉಪ್ಪೂರು: ಭಾರತ ಸರ್ಕಾರ, ಯುವ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಇವರ ಸಹಭಾಗಿತ್ವದಲ್ಲಿ ಯುವ ವಿಚಾರ ವೇದಿಕೆ ಉಪ್ಪೂರು ಕೊಳಲಗಿರಿ, ಸರಕಾರಿ ಪ್ರೌಢಶಾಲೆ ಉಪ್ಪೂರು ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನದ ಪ್ರಯುಕ್ತ ಸ್ವಾತಂತ್ರ್ಯ ಅಮೃತ ಮಹೋತ್ಸವ ಫಿಟ್ ಇಂಡಿಯಾ ಓಟ ಕಾರ್ಯಕ್ರಮ ನಡೆಯಿತು.
ಗ್ರಾಮ ಪಂಚಾಯತ್ ಸದಸ್ಯರಾದ ಅಶ್ವಿನ್ ರೋಚ್, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ರತ್ನಾಕರ್ ಶೆಟ್ಟಿ, ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದ ಅಧ್ಯಕ್ಷರಾದ ರೋನಿ ಒಟ್ಟಾಗಿ ಸಂಘದ ಧ್ವಜದಿಂದ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಕೊಳಲಗಿರಿ ಜಂಕ್ಷನ್ ನಿಂದ ಪ್ರಾರಂಭವಾಗಿ ಸರಕಾರಿ ಪ್ರೌಢಶಾಲೆ ಉಪ್ಪೂರು ವರೆಗೆ ಫ್ರೀಡಮ್ ರನ್ ನಡೆಯಿತು. ಆರೋಗ್ಯವೇ ಭಾಗ್ಯ, ಸ್ವಚ್ಛತೆಯೇ ಸ್ವರ್ಗ ಘೋಷಣೆ ಹಾಕಿ ಓಟ ನಡೆಯಿತು.
ಪ್ರೌಢಶಾಲೆ ಹಾಗೂ ಜಿಟಿಟಿಸಿ ಕಾಲೇಜಿನ ಸುಮಾರು 75 ವಿದ್ಯಾರ್ಥಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ, ಯುವ ವಿಚಾರ ವೇದಿಕೆಯ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಪ್ರೌಢಶಾಲೆಯ ಶಿಕ್ಷಕರಾದ ಪ್ರಸನ್ನ ಶೆಟ್ಟಿ, ಸ್ಪಂದನ ಶಾಲೆಯ ಉಮೇಶ್, ಉಪ್ಪೂರು ವ್ಯ.ಸೆ.ಸ.ಸಂಘದ ವ್ಯವಸ್ಥಾಪಕರಾದ ಸಂದೀಪ್ ಶೆಟ್ಟಿ, ಅಶೋಕ್, ರವೀಂದ್ರ, ಶಶಿಕುಮಾರ್, ಸುಕೇಶ್, ವೈಭವ್, ಶ್ರೇಯಸ್, ಜಿತು, ಶಕುಂತಲಾ, ಸೌಮ್ಯ, ಬೃಂದಾ ಹರಿಣಾಕ್ಷಿ, ಇತರ ಸದಸ್ಯರು, ರಿಕ್ಷಾ ಚಾಲಕರು ಹಾಗೂ ಮಾಲಕರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯೋಗೀಶ್ ಕೊಳಲಗಿರಿ ಸ್ವಾಗತಿಸಿ, ಸುಬ್ರಹ್ಮಣ್ಯ ಆಚಾರ್ಯ ಧನ್ಯವಾದವಿತ್ತು ಕಾರ್ಯಕ್ರಮ ನಿರೂಪಿಸಿದರು.