ಮಂಗಳೂರು ಮಹಾನಗರ ಪಾಲಿಕೆಯ ಪದವು ಸೆಂಟ್ರಲ್ ವಾರ್ಡಿನ ರಾಜೀವನಗರದಲ್ಲಿ ಕಾರ್ಮಿಕರಿಗೆ ಉಚಿತ ಲಸಿಕಾ ಅಭಿಯಾನ ನಡೆಯಿತು. ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ರಾಜೀವನಗರದಲ್ಲಿ ಕಾರ್ಮಿಕರಿಗಾಗಿ ಉಚಿತ ಲಸಿಕೆ ವಿತರಿಸಲಾಗುತ್ತಿದ್ದು ಸಾರ್ವಜನಿಕರು ಲಸಿಕೆ ಪಡೆದುಕೊಳ್ಳಬೇಕು. ಲಾಕ್ ಡೌನ್ ಸಡಿಲಗೊಳಿಸಿದರೂ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪ್ರತಿಯೊಬ್ಬರೂ ಪಾಲಿಸಬೇಕೆಂದರು.
ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಮ.ನ.ಪಾ ಸದಸ್ಯ ಕಿಶೋರ್ ಕೊಟ್ಟಾರಿ, ವೈದ್ಯಾಧಿಕಾರಿ ಡಾ. ದೀಪ್ತಿ, ನೀಲೆಶ್ ಕಾಮತ್, ವಾಸುದೇವ, ಅಶ್ವಿತ್ ಕೊಟ್ಟಾರಿ, ಹರೀಶ್ ರೈ, ರೀತೇಶ್, ಉಮೇಶ್, ಚಂದ್ರ, ಮಣಿ, ಮಾಧವ ಭಟ್, ದೇವಿ ಪ್ರಸಾದ್, ಮೋಹಿತ್ ಮುಂತಾದವರು ಉಪಸ್ಥಿತರಿದ್ದರು.