Monday, November 25, 2024
Monday, November 25, 2024

ಕಾರ್ಕಳ: ಡಾ ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಮೂತ್ರಪಿಂಡ (ಕಿಡ್ನಿ) ರೋಗದ ಉಚಿತ ತಪಾಸಣಾ ಶಿಬಿರ

ಕಾರ್ಕಳ: ಡಾ ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಮೂತ್ರಪಿಂಡ (ಕಿಡ್ನಿ) ರೋಗದ ಉಚಿತ ತಪಾಸಣಾ ಶಿಬಿರ

Date:

ಕಾರ್ಕಳ: ಸೆಪ್ಟೆಂಬರ್ 17ರಂದು ಡಾ ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಮೂತ್ರಪಿಂಡ (ಕಿಡ್ನಿ) ರೋಗದ ಉಚಿತ ತಪಾಸಣಾ ಶಿಬಿರ ನಡೆಯಲಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ ಕೀರ್ತಿನಾಥ್ ಬಲ್ಲಾಳ ಅವರು ತಿಳಿಸಿದ್ದಾರೆ.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮೂತ್ರಪಿಂಡ ವಿಭಾಗದ ಮುಖ್ಯಸ್ಥರಾದ ಡಾ. ಶಂಕರ್ ಪ್ರಸಾದ್ ಮತ್ತು ಸಹಾಯಕರಾದ ಡಾ ಮೋಹನ್ ಅವರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಶಿಬಿರವು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ನಡೆಯಲಿದ್ದು, ವೈದ್ಯರ ಸಲಹೆ ಮೇರೆಗೆ ಅವಶ್ಯವುಳ್ಳ ಮೊದಲ 50 ಜನರಿಗೆ ರಕ್ತದಲ್ಲಿನ ಸಕ್ಕರೆ, ಲಿಪಿಡ್ ಪ್ರೊಫೈಲ್, ಸೆರಂ ಎಲೆಕ್ಟ್ರಾಲ್ಯೆಟ್ಸ್, ಸೆರಂ ಕ್ರಿಯೇಟೆನಿನ್ ಮತ್ತು ಮೂತ್ರ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುವುದು.

ಈ ಕೆಳಗಿನ ಲಕ್ಷಣವುಳ್ಳವರು ಶಿಬಿರಕ್ಕೆ ಹಾಜರಾಗಬಹುದು. ಬೆಳಿಗ್ಗೆ ಎದ್ದ ತಕ್ಷಣ ಕಣ್ಣುಗಳ ಸುತ್ತ ಬಾವು, ಕೈ ಮತ್ತು ಮುಖದಲ್ಲಿ ಬಾವು, ಹಸಿವು ಕಡಿಮೆಯಾಗುವುದು, ವಾಂತಿ ಬರುವುದು, ರಾತ್ರಿ ವೇಳೆ ಮೇಲಿಂದ ಮೇಲೆ ಮೂತ್ರ ವಿಸರ್ಜನೆ, ಸಣ್ಣ ವಯಸ್ಸಿನಲ್ಲಿ ಅಧಿಕ ರಕ್ತದ ಒತ್ತಡ, ರಕ್ತದೀನತೆ, ಅಶಕ್ತತೆ, ಮೂತ್ರದಲ್ಲಿ ಊತ, ರಕ್ತ ಅಥವಾ ಕೇವು ಹೋಗುವುದು, ಹೊಟ್ಟೆಯಲ್ಲಿ ಗಂಟು, ಸೊಂಟದಲ್ಲಿ ನೋವು, ಮೂತ್ರ ವಿಸರ್ಜನೆ ಕಷ್ಟವಾಗುವುದು, ಇತ್ಯಾದಿಗಳು ಕಿಡ್ನಿ ರೋಗದ ಲಕ್ಷಣಗಳು.

ಇದರ ಜೊತೆಗೆ ದೀರ್ಘ ಅವಧಿಯಿಂದ ಸಕ್ಕರೆ ಕಾಯಿಲೆವುಳ್ಳವರು ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಬಹುದು. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೌಲಭ್ಯವಿದ್ದು, ಇದರ ಪ್ರಯೋಜನವನ್ನು ಅವಶ್ಯವುಳ್ಳವರು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂ: 9731308293 / 08258 230583 ಕರೆ ಮಾಡಬಹುದು ಎಂದು ಮುಖ್ಯ ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!