ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮಂಗಳೂರು ಮತ್ತು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನಲ್ಲಿ ಕೊಂಕಣಿ ಅಕಾಡೆಮಿಯಲ್ಲಿ ಇದ್ದ ನಿರುಪಯೋಗಿ ವಾಹನವೊಂದನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಲಾಯಿತು. ಸೇವಾಂಜಾಲಿ ಚಾರಿಟೇಬಲ್ ಟ್ರಸ್ಟ್ ಈ ವಾಹನವನ್ನು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿಗೊಳಿಸಿ ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಮತ್ತು ರೋಗಿಗಳು ಮೃತಪಟ್ಟರೆ ಉಚಿತವಾಗಿ ಸೇವೆ ಒದಗಿಸಲು ಬಳಸಲು ಹಾಗೂ ಇನ್ನಿತರ ಸಮಾಜ ಸೇವೆಗೆ ಬಳಸುವರೆ ಕೊಂಕಣಿ ಅಕಾಡೆಮಿಗೆ ಈ ಹಿಂದೆ ಮನವಿ ಸಲ್ಲಿಸಿರುತ್ತಾರೆ.
ಅಧ್ಯಕ್ಷರು ಮತ್ತು ಸರ್ವಸದಸ್ಯರ ಒಪ್ಪಿಗೆ ಮೇರೆಗೆ ಗುರುವಾರ ಈ ವಾಹನ ಹಸ್ತಾಂತರಿಸಲಾಯಿತು. ಸೇವಾಂಜಲಿ ಟ್ರಸ್ಟ್ ಇದರ ಹನುಮಂತ ಕಾಮತ್, ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್, ಕೊಂಕಣಿ ಅಕಾಡೆಮಿ ರಿಜಿಸ್ಟ್ರಾರ್ ಮನೋಹರ್ ಕಾಮತ್, ಸದಸ್ಯರಾದ ಅರುಣ್ ಜಿ ಶೇಟ್, ಗೋಪಾಲಕೃಷ್ಣ ಭಟ್, ಕೆನ್ಯೂಟ ಜೀವನ್ ಪಿಂಟೋ, ನವೀನ್ ನಾಯಕ್ ಉಪಸ್ಥಿತರಿದ್ದರು.