Monday, October 7, 2024
Monday, October 7, 2024

ಶಾರದೋತ್ಸವದಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ: ಯಶ್ಪಾಲ್ ಸುವರ್ಣ

ಶಾರದೋತ್ಸವದಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ: ಯಶ್ಪಾಲ್ ಸುವರ್ಣ

Date:

ಬಿಲ್ಲಾಡಿ: ಸಾರ್ವಜನಿಕ ಶಾರದೋತ್ಸವ ಸಮಿತಿ ಬಿಲ್ಲಾಡಿ ಮತ್ತು ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ಇದರ ಆಶ್ರಯದಲ್ಲಿ ಆಯೋಜಿಸಿದ 5 ನೇ ವರ್ಷದ ಶಾರದೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆಯ ನೇತೃತ್ವದಲ್ಲಿ ಬಿಲ್ಲಾಡಿಯಲ್ಲಿ ಶಾರದೋತ್ಸವದ ಮೂಲಕ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಧಾರ್ಮಿಕತೆಯ ಜೊತೆಗೆ ವೇದಿಕೆಯ ನೇತೃತ್ವದಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳಾಗಲಿ ಎಂದು ಶುಭ ಹಾರೈಸಿದರು.

ಶಾರದೋತ್ಸವದ ಪ್ರಯುಕ್ತ ಗೋವಿಗಾಗಿ ಮೇವು ಕಾರ್ಯಕ್ರಮವನ್ನು ಬಿಜೆಪಿ ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ವಂಡಾರು ಹಸ್ತಾಂತರಿಸಿದರು. ನಿವೃತ್ತ ಶಿಕ್ಷಕ ಚಂದ್ರಶೇಖರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಿ ಕೆ ಹೆಗ್ಡೆ ವಹಿಸಿದ್ದರು.

ಶಾರದೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷರಾದ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ಅಧ್ಯಕ್ಷರಾದ ಪ್ರಿಯದರ್ಶನ್ ಶೆಟ್ಟಿ, ಶಾರದೋತ್ಸವ ಸಮಿತಿ ಅಧ್ಯಕ್ಷರಾದ ನಾರಾಯಣ ನಾಯ್ಕ್, ಹೆಗ್ಗುಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಣೇಶ್ ಶೆಟ್ಟಿ, ಉದ್ಯಮಿ ಗ್ರಾ.ಪಂ ಸದಸ್ಯರಾದ ಗುರುಪ್ರಸಾದ್ ನೀರ್ಜೆಡ್ಡು, ಬಿಲ್ಲಾಡಿ ಗ್ರಾ.ಪಂ ಉಪಾದ್ಯಕ್ಷ ಪ್ರಕಾಶ್ ಶೆಟ್ಟಿ ನೈಲಾಡಿ, ಮಾಜಿ ತಾ.ಪಂ ಸದಸ್ಯೆ ನಿರ್ಮಲಾ ಶೆಟ್ಟಿ, ಮಾಜಿ ಗ್ರಾ.ಪಂ ಅಧ್ಯಕ್ಷೆ ರುಕ್ಮಿಣಿ ಶೆಟ್ಟಿ, ಶಾರದೋತ್ಸವ ಸಮಿತಿ ಮಹಿಳಾ ಅಧ್ಯಕ್ಷೆ ವೀಣಾ ಕೊಠಾರಿ, ಪ್ರಧಾನ ಕಾರ್ಯದರ್ಶಿ ಅಕ್ಷತ ಕುಂದರ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ರಮಣಶ್ರೀ ಶರಣ ಸಾಹಿತ್ಯ ಪ್ರಶಸ್ತಿ

ಉಡುಪಿ, ಅ.6: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ...

ಮಾಣಿಬೆಟ್ಟು- ಪ್ರಾಚ್ಯ: ತೌಳವ ಕರ್ಣಾಟ ಶೀರ್ಷಿಕೆಯಡಿಯಲ್ಲಿ ಪುಷ್ಕರಣಿ ಸ್ವಚ್ಛತಾ ಕಾರ್ಯಕ್ರಮ

ಶಿರ್ವ, ಅ.6: ಶ್ರೀನಿಕೇತನ ವಸ್ತುಸಂಗ್ರಹಾಲಯ & ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ...

ನೀರಿನಲ್ಲಿ ಜೀವಿಸುವ ಪಕ್ಷಿಗಳ ಅಂಚೆ ಚೀಟಿ ಪ್ರದರ್ಶನ

ಬಾರಕೂರು, ಅ. 6: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ...

ಅಮೃತೇಶ್ವರಿ ದೇಗುಲ: ಶರನ್ನವರಾತ್ರಿ ಉತ್ಸವ

ಕೋಟ, ಅ.6: ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ...
error: Content is protected !!