Sunday, January 19, 2025
Sunday, January 19, 2025

ಚೇರ್ಕಾಡಿ ದೊಡ್ಡಮನೆ ಸುಲೋಚನಾ ಶೆಟ್ಟಿ ಕೊಡವೂರು ಅಭಿನಂದನಾ ಸಮಾರಂಭ

ಚೇರ್ಕಾಡಿ ದೊಡ್ಡಮನೆ ಸುಲೋಚನಾ ಶೆಟ್ಟಿ ಕೊಡವೂರು ಅಭಿನಂದನಾ ಸಮಾರಂಭ

Date:

ಕೊಡವೂರು: ಶಿಕ್ಷಕಿ, ಸಾಮಾಜಿಕ ಸಂಘಟಕಿ, ಹೋರಾಟಗಾರ್ತಿ, ಸಾಹಿತಿ, ಕವಯತ್ರಿ, ಸಹಕಾರಿ ಕ್ಷೇತ್ರದ ಧುರೀಣೆ, ಆರೋಗ್ಯ ಕಾರ್ಯಕರ್ತೆ ಚೇರ್ಕಾಡಿ ದೊಡ್ಡಮನೆ ಸುಲೋಚನಾ ಶೆಟ್ಟಿ ಕೊಡವೂರು ರವರ ಸಾರ್ಥಕತೆಯ 75ರ ಸಂಭ್ರಮ ಕಾರ್ಯಕ್ರಮ ಇಂದು ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಚೇರ್ಕಾಡಿ ದೊಡ್ಡಮನೆ ಹಿರಿಯರಾದ ಜಯರಾಮ್ ಹೆಗ್ಡೆ, ಅತಿಥಿಗಳಾಗಿ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ್ ಹೆಗ್ಡೆ, ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕರಾದ ಸತ್ಯೇ0ದ್ರ ಪೈ, ಪಡಿ ವೆಲೋರೆಡ್ ಸಂಸ್ಥೆಯ ನಿರ್ದೇಶಕರಾದ ರೆನ್ನಿ ಡಿಸೋಜ, ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಲದ ನಿರ್ದೇಶಕರಾದ ಇಂದ್ರಾಳಿ ಜಯಕರ್ ಶೆಟ್ಟಿ, ದ.ಕ. ಹಾಗೂ ಉಡುಪಿ ಸಹಕಾರಿ ಉಪನಿಬ0ಧಕರಾದ ಪ್ರವೀಣ್ ಬಿ ನಾಯಕ್, ನಗರಸಭಾ ಸದಸ್ಯರಾದ ಶ್ರೀಶ ಆಚಾರ್ಯ, ವಿಜಯ್ ಕೊಡವೂರುರವರು ಆಗಮಿಸಿದರು. ಸನ್ಮಾನಿತರ ಹಿತೈಷಿಗಳು, ಕುಟುಂಬಸ್ಥರು, ಸಹುದ್ಯೋಗಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಜಾನಕಿ ಬ್ರಹ್ಮಾವರರವರು, ಸುಲೋಚನಾ ಕೊಡವೂರು ಓರ್ವ ಧೀಮಂತ ಮಹಿಳೆ. ಇವರು ಶಿಕ್ಷಕಿ, ಸಾಹಿತಿ, ಸಂಘಟಕಿ, ಆರೋಗ್ಯ ಕಾರ್ಯಕರ್ತೆ ಹೀಗೆ ಹತ್ತಾರು ಮಜಲುಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ ಮೇರು ವ್ಯಕ್ತಿತ್ವ. ಅವರ ವ್ಯಕ್ತಿತ್ವದ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು ಹಾಗೇ ಅವರ ಜೀವನ ನಮಗೆಲ್ಲರಿಗೂ ಮಾದರಿ ಎಂದರು.

ಮತ್ತೋರ್ವ ಅತಿಥಿಯಾಗಿದ್ದ ರೆನ್ನಿ ಡಿಸೋಜರವರು ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಸಮಾಜಕ್ಕೆ ಸುಲೋಚನಾರವರು ಒಂದು ಬಹುದೊಡ್ಡ ಆಸ್ತಿ. ಅವರು ಸಾಕ್ಷರತಾ ಆಂದೋಲನದಲ್ಲಿ ನಿರ್ವಹಿಸಿದ ಪಾತ್ರ ಅವಿಭಜಿತ ದ.ಕ. ಜಿಲ್ಲೆಗೆ ಒಂದು ಮುಖ್ಯ ಕೊಡುಗೆ ಎಂದರು.

ಕಾರ್ಯಕ್ರಮಕ್ಕೆ ವಿಡಿಯೋ ಸಂದೇಶದ ಮೂಲಕ ಪದ್ಮವಿಭೂಷಣ ಡಾ.ಬಿ.ಎಂ.ಹೆಗ್ಡೆ, ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿಯವರು 75ರ ಸಾರ್ಥಕ ಜೀವನವನ್ನು ತಮ್ಮ ಆದರ್ಶಗಳಿಂದ ಔನತ್ಯಕ್ಕೇರಿಸಿದ ಸುಲೋಚನಾ ಶೆಟ್ಟಿಯವರಿಗೆ ತಮ್ಮ ಶುಭ ಸಂದೇಶಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಸುಲೋಚನಾ ಕೊಡವೂರುರವರ 75ರ ಕುರಿತ ಕಿರುಚಿತ್ರ ಹಾಗೂ ವೆಬ್ಸೈಟ್ ಲೋಕಾರ್ಪಣೆ ಮಾಡಲಾಯ್ತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಲೋಚನಾ ಕೊಡವೂರುರವರು, ನಾನು ನನ್ನ ಬಯಕೆಯಂತೆಯೇ ಓರ್ವ ಶಿಕ್ಷಕಿಯಾಗಿದ್ದು, ಹತ್ತು ಹಲವು ಕ್ಷೇತ್ರದ ಅನುಭವವನ್ನು ಸದಾ ಪಡೆದದ್ದು ನನ್ನನ್ನು ಒಬ್ಬ ಉತ್ತಮ ಶಿಕ್ಷಕಿಯನ್ನಾಗಿ ಹಾಗೂ ವ್ಯಕ್ತಿತ್ವವನ್ನು ಹೊಂದುವಂತೆ ಮಾಡಿತು. ನನ್ನ ಜೀವನಕ್ಕೆ ಶಿಕ್ಷಕರಾಗಿದ್ದ ನನ್ನ ತಂದೆಯೇ ನನ್ನೆಲ್ಲ ಸಾಧನೆಗೆ ಪ್ರೇರಣೆ. ಅವರ ಶಿಸ್ತು, ಸಮಯಪಾಲನೆ ಇತ್ಯಾದಿ ಗುಣಗಳು ನನ್ನ ವೃತ್ತಿಯಲ್ಲಿ ನಾನು ಯಶಸ್ಸು ಕಾಣುವಂತೆ ಮಾಡಿತು.ನನ್ನ ನೇರ ನುಡಿ ನಿಷ್ಠುರವಾದಿತನವೇ ನನ್ನ ಶಕ್ತಿ. ಇಂದಿನ ಈ ಸಂಭ್ರಮ ನನ್ನಗಷ್ಟೇ ಅಲ್ಲದೇ, ಸಮಾಜಮುಖಿಯಾಗಿ ಕೆಲಸ ಮಾಡುವ ಇನ್ನಷ್ಟು ಜನರಿಗೆ ಪ್ರೇರಣೆ ಹಾಗೂ ಸ್ಫೂರ್ತಿಯಾಗಲಿ ಎಂಬುದೇ ನನ್ನ ಹರಕೆ ಎಂದು ನುಡಿದರು.

ಸಭೆಯ ಪ್ರಾಸ್ತಾವಿಕ ನುಡಿಗಳನ್ನು ಪ್ರೇಮ್ ಪ್ರಸಾದ್ ಶೆಟ್ಟಿ, ವಂದನಾರ್ಪಣೆಯನ್ನು ಶಿವರಾಮ್ ಅವರು ನೆರವೇರಿಸಿದರು. ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!