ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮದಿನಾಚರಣೆ ಪ್ರಯುಕ್ತ “ಸೇವೆ ಮತ್ತು ಸಮರ್ಪಣೆ” ಅಂಗವಾಗಿ ನಿವೃತ್ತ ಯೋಧ ಕಿದಿಯೂರು ಜಗನ್ನಾಥ ಬಂಗೇರ ರವರನ್ನು ನಗರ ಯುವ ಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ನಯನಾ ಗಣೇಶ್, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರುಗಳಾದ ಸಚಿನ್ ಬೊಳ್ಜೆ, ವಿಜೇತ್ ಕುಮಾರ್ ಬೆಳ್ಳರ್ಪಾಡಿ, ಅಂಬಲಪಾಡಿ ಪಂಚಾಯತ್ ಅಧ್ಯಕ್ಷರಾದ ರೋಹಿಣಿ ಪೂಜಾರಿ, ಉಪಾಧ್ಯಕ್ಷರಾದ ಸೋಮನಾಥ ಬಿ. ಕೆ, ಡಾ. ಸುರೇಖ ಶೆಟ್ಟಿ, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಶಾಂತ್ ಪೂಜಾರಿ, ನಗರ ಯುವ ಮೋರ್ಚಾ ಪಧಾದಿಕಾರಿಗಳಾದ ಸಂದೇಶ್ ಪ್ರಭು, ಶ್ರೀವತ್ಸ, ಯೋಗೀಶ್ ದೇವಾಡಿಗ, ಶರತ್, ಕಾರ್ತಿಕ್ ಉಪಸ್ಥಿತರಿದ್ದರು.