ಕುಂದಾಪುರ: ಸಂಜೀವ ಪಾರ್ವತಿ ಪ್ರಕಾಶನ ಗಂಗೊಳ್ಳಿ ವತಿಯಿಂದ ಎಸ್ ಎಂ ಗೋಪಾಲಕೃಷ್ಣ ಬೆಳ್ಳಾರೆ ಪ್ರಾಯೋಜಕತ್ವದಲ್ಲಿ ಪೈ ಟೆಕ್ಸ್ ಟೈಲ್ಸ್ ಮತ್ತು ಪೈ ಗಾರ್ಮೆಂಟ್ಸ್ ಗಂಗೊಳ್ಳಿ ಸಹಕಾರದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ.

2021- 22 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿರುವ ಉಡುಪಿ ಜಿಲ್ಲೆಯ ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದಾಗಿದೆ. ಪ್ರಬಂಧದ ವಿಷಯ ‘ನನ್ನ ಪ್ರೇರಣೆಯ ಶ್ರೀಕೃಷ್ಣ.’ ಆಸಕ್ತಿ ಉಳ್ಳವರು ಪ್ರಬಂಧವನ್ನು ಎ ಫೋರ್ ಅಳತೆಯ ಕಾಗದದಲ್ಲಿ ಮೂರು ಪುಟಗಳಿಗೆ ಮೀರದಂತೆ ಕಾಗದದ ಒಂದೇ ಮಗ್ಗುಲಲ್ಲಿ ಸ್ವಹಸ್ತಾಕ್ಷರದಲ್ಲಿ ಕನ್ನಡದಲ್ಲಿ ಬರೆಯಬೇಕು. ಸ್ಪರ್ಧಿಗಳು ಕೊನೆಯ ಪುಟದಲ್ಲಿ ತಮ್ಮ ಪೂರ್ಣ ಹೆಸರು, ತರಗತಿ, ಊರು, ಮೊಬೈಲ್ ಸಂಖ್ಯೆ ಮತ್ತು ತಾವು ಕಲಿಯುತ್ತಿರುವ ಕಾಲೇಜಿನ ವಿಳಾಸವನ್ನು ಕಡ್ಡಾಯವಾಗಿ ಬರೆಯಬೇಕು.
ವಿಜೇತರಿಗೆ ಪ್ರಥಮ ಮತ್ತು ದ್ವಿತೀಯ ನಗದು ಬಹುಮಾನದ ಜೊತೆಗೆ ಡಿಜಿಟಲ್ ಪ್ರಮಾಣ ಪತ್ರವನ್ನು ನೀಡಲಾಗುವುದು. ಪ್ರಬಂಧವನ್ನು 8-9 -2021ರ ಒಳಗೆ ಪೋಸ್ಟ್ ಮೂಲಕ ಅಥವಾ ಖುದ್ದಾಗಿ ನರೇಂದ್ರ ಎಸ್ ಗಂಗೊಳ್ಳಿ. ಸಂಜೀವ ಪಾರ್ವತಿ ಪ್ರಕಾಶನ. ಮ್ಯಾಂಗನೀಸ್ ರಸ್ತೆ ಗಂಗೊಳ್ಳಿ. ಕುಂದಾಪುರ ತಾಲೂಕು 576216 ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9242127307 ಸಂಪರ್ಕಿಸಲು ಕೋರಿದೆ.
Essay