ಮಣಿಪಾಲ: ಸಹಾಯ ಹಸ್ತಾ ಮಣಿಪಾಲ್ ಲಯನ್ಸ್ ಚಾರಿಟೇಬಲ್ ಫೌಂಡೇಶನ್, ದಿ ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಲಯನ್ಸ್ ಕ್ಲಬ್ ಜಿಲ್ಲೆ 317 ಸಿ ವತಿಯಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗಕ್ಕೆ ಇನ್ಫ್ಯೂಷನ್ ಪಂಪ್ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕೀಮೋಥೆರಪಿ ಔಷಧಿಗಳನ್ನು ಎಚ್ಚರಿಕೆಯಿಂದ ಕ್ಯಾನ್ಸರ್ ಮಕ್ಕಳಿಗೆ ನೀಡುವಲ್ಲಿ ಇನ್ಫ್ಯೂಷನ್ ಪಂಪ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಲಯನ್ಸ್ ಕ್ಲಬ್ ಜಿಲ್ಲೆ 317 ಸಿ ಇದರ ಜಿಲ್ಲಾ ರಾಜ್ಯಪಾಲರಾದ ಪಿಎಂಜೆಎಫ್ ಎಚ್ ವಿಶ್ವನಾಥ್ ಶೆಟ್ಟಿ, ಕೆಎಂಸಿ ಡೀನ್ ಡಾ. ಶರತ್ ಕೆ ರಾವ್, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಸಹಾಯ ಹಸ್ತಾ ಮಣಿಪಾಲ್ ಲಯನ್ಸ್ ಚಾರಿಟೇಬಲ್ ಫೌಂಡೇಶನ್ ಮುಖ್ಯಸ್ಥರಾದ ಪಿಎಂಜೆಎಫ್ ಡಾ. ಎಚ್ ಗಣೇಶ್ ಪೈ, ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಡಾ.ವಾಸುದೇವ ಭಟ್ ಮತ್ತು ಇತರ ಲಯನ್ಸ್ ಗಣ್ಯರು ಉಪಸ್ಥಿತರಿದ್ದರು.