Monday, January 20, 2025
Monday, January 20, 2025

ಸಾಧನೆಗೆ ಪ್ರೋತ್ಸಾಹ ಇಂಧನ: ರಮಿತಾ ಶೈಲೇಂದ್ರ

ಸಾಧನೆಗೆ ಪ್ರೋತ್ಸಾಹ ಇಂಧನ: ರಮಿತಾ ಶೈಲೇಂದ್ರ

Date:

ಅಜೆಕಾರು: ಪ್ರತಿ ಮಹಿಳೆಯೂ ಸಾಧಕಿಯೇ ಆಗಿದ್ದಾರೆ. ಆದರೆ ಕೆಲವರಿಗೆ ಅವಕಾಶಗಳು ದೊರಕಿ ಅವರ ಸಾಧನೆಗಳು ಅನಾವರಣಗೊಳ್ಳುತ್ತದೆ. ಕೆಲವರ ಸಾಧನೆಗೆ ಪ್ರಚಾರ ಸಿಗುವುದಿಲ್ಲ ಎಂದು ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತ ರಮಿತಾ ಶೈಲೇಂದ್ರ ರಾವ್ ಹೇಳಿದರು.

ಅವರು ಅಜೆಕಾರಿನ ಕುರ್ಪಾಡಿ ಬೊಬ್ಬರ್ಯಸ್ಥಾನದ ಗ್ರಾಮೋತ್ಸವ ಕಾನನ ಮಂಟಪದಲ್ಲಿ ಭಾನುವಾರ ನಡೆದ ಕಾನನ ಮಹಿಳಾ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಆದಿಗ್ರಾಮೋತ್ಸವ ಸಮಿತಿ ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಅತಿಥಿಗಳು ಸಾಧಕ, ಸಮಾಜ ಸೇವಾಸಕ್ತ ಮಹಿಳೆ ರಮಿತಾ ಅವರನ್ನು ಗೌರವಿಸುವ ಮೂಲಕ ಉದ್ಘಾಟಿಸಿದರು.

ಮಹಿಳೆಯರು ಸಾಧನೆ ಮಾಡುವಾಗ ಮನೆಯವರು ಪ್ರೋತ್ಸಾಹ ನೀಡಿದರೆ ಸಮಾಜಕ್ಕೆ ಹೆಚ್ಚಿನ ಕೊಡುಗೆ ಹರಿದು ಬರುವುದೆಕ್ಕೆ ಸಾಧ್ಯವಿದೆ. ಸಾಧನೆಗೆ ಪ್ರೋತ್ಸಾಹವೇ ಇಂಧನವಾಗಿದೆ. ಮಹಿಳೆಯರ ಸಾಧನೆಯನ್ನು ಗೌರವಿಸುವ ಮೂಲಕ ಮತ್ತು ಅವರಿಗೆ ಪ್ರತ್ಯೇಕ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕಾನನ ಮಂಟಪ ಹೊಸ ಭಾಷ್ಯ ಬರೆದಿದೆ. ನನ್ನ ಸಾಧನೆಯಲ್ಲಿ ಶೈಲೇಂದ್ರ ಮತ್ತು ಅತ್ತೆ-ಮಾವನವರ ತುಂಬು ಪ್ರೋತ್ಸಾಹ ಇದೆ ಎಂದರು.

ಆರನೇ ತರಗತಿಯಲ್ಲಿ ಇರುವಾಗ ಸೈಕಲ್ ಏರಿ ಹೋದಾಗ ಜನ ಸರ್ಕಸ್‌ನವರನ್ನು ನೋಡಿದ ಹಾಗೆ ನೋಡುತ್ತಿದ್ದರು. ಕಡುಬಡತನದಿಂದ ಸತತ ಶ್ರಮದಿಂದ ಉಳಿತಾಯ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸಾಧ್ಯವಾಗಿದೆ ಎಂದು ಕ.ಪಿ.ಪದ್ಯಾವತಿ ಹೇಳಿದರು.

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಯಶೋದ ಶೆಟ್ಟಿ, ಅಜೆಕಾರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಯಶೋದ ಶೇಖರ್ ಶೆಟ್ಟಿ, ಸಣ್ಣ ಉಳಿತಾಯ ಕ್ಷೇತ್ರದ ಸಾಧಕಿ ಪದ್ಮಾವತಿ ಕೆ.ಪಿ, ಬಂಡಸಾಲೆ ಮಹಮ್ಮಾಯಿ ಭಜನಾ ಮಂಡಳಿ ಅಧ್ಯಕ್ಷೆ ವಿಮಲಾ ನಾಯ್ಕ್, ಕಾರ್ಯದರ್ಶಿ ಶಶಿಕಲಾ ಹೆಗ್ಡೆ, ಜಲನಯನ ಸ್ವ ಸಹಾಯ ಸಂಘದ ಶಾಲಿನಿ ಶೆಟ್ಟಿ, ದೀಕ್ಷಾ ಸ್ವ ಸಹಾಯ ಗುಂಪಿನ ಸುಖಲತಾ ಶೆಟ್ಟಿ, ಮರ್ಣೆ ಗ್ರಾಮ ಪಂಚಾಯತ್ ಸದಸ್ಯೆ ಪ್ರಮೋದಾ ದಾಮೋದರ್, ಸ್ವಚ್ಚ ಕಾರ್ಕಳದ ಸುನೀತಾ ಅಂಡಾರ್ ಮೊದಲಾದವರು ಅತಿಥಿಗಳಾಗಿದ್ದರು. ನಿವೃತ್ತ ಮೂಖ್ಯೋಪಾಧ್ಯಾಯರಾದ ಮೌರೀಸ್ ತಾವ್ರೋ ಶುಭ ಹಾರೈಸಿದರು.

ಯುವ ಗಾಯಕ ದಿನಕರ್ ಸಾಬರಕಟ್ಟೆ ಅವರ ಗಾನ ಸವಿಗಾನ ಸಂಗೀತ ಕಾರ್ಯಕ್ರಮ, ೩ ವರ್ಷದ ಬಾಲಕಿ ಸಾನಿಧ್ಯ ಕವತ್ತಾರು, ಆದ್ಯ ಕಾರ್ಕಳ, ಸುನಿಜ ಅಜೆಕಾರು, ಸಿಂಚನಾ ಕಾಬೆಟ್ಟು, ಪ್ರಕೃತಿ ಕೈಕಂಬ ವಿಶೇಷ ಅಕರ್ಷಣೆಯಾಗಿತ್ತು. ಬಾಲಕೃಷ್ಣ ಹೆಗ್ಡೆ ಅಜೆಕಾರು, ಕಾವ್ಯ ಕಣಜಾರು, ಚಂದ್ರಮೌಳಿ ಪುತ್ತೂರು ಅವರು ಕವಿತೆಗಳ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿದರು.

ಕುರ್ಸುಕಟ್ಟೆ ಅಂಗನವಾಡಿ ಶಿಕ್ಷಕಿ ಶಕುಂತಳಾ ಸ್ವಾಗತಿಸಿ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು ವಂದಿಸಿದರು. ಕವಯತ್ರಿ ಕಾವ್ಯ ಕಣಜಾರು ಕಾರ್ಯಕ್ರಮ ನಿರೂಪಿಸಿದರು.

ಸಮಿತಿಯ ರಾಜ್ಯಾಧ್ಯಕ್ಷ ಡಾ. ಶೇಖರ ಅಜೆಕಾರು, ಮಕ್ಕಳ ವಿಭಾಗದ ಸಂಚಾಲಕ ಸುನಿಧಿ ಅಜೆಕಾರು ಕಾರ್ಯಕ್ರಮ ಸಂಯೋಜಿಸಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!