Monday, February 24, 2025
Monday, February 24, 2025

ಇನಾಯತ್ ಗ್ಯಾಲರಿ ರಜತ ಮಹೋತ್ಸವ ಸಮಾರಂಭ

ಇನಾಯತ್ ಗ್ಯಾಲರಿ ರಜತ ಮಹೋತ್ಸವ ಸಮಾರಂಭ

Date:

ಉಡುಪಿ: ಇನಾಯತ್ ಆರ್ಟ್ ಗ್ಯಾಲರಿ ಉಡುಪಿ ಇದರ ರಜತ ಮಹೋತ್ಸವ ಸಮಾರಂಭ ಅದೇ ರೀತಿ ನವೀಕೃತ ಗ್ಯಾಲರಿ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಿ ಮಾತನಾಡಿ, 25 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಈ ಗ್ಯಾಲರಿ ಇನ್ನೂ ಉತ್ತಮವಾಗಿ ಬೆಳೆಯಲಿ. ಕಲಾವಿದರಿಗೆ ತನ್ನ ಕಲಾಕೃತಿಯ ಮೂಲಕ ಹೆಸರು ಪಡೆಯಲು ಸಾಧ್ಯ. ಈ ಆರ್ಟ್ ಗ್ಯಾಲರಿ ಉಡುಪಿಯ ಘನತೆಗೆ ಕಲಶವಿಟ್ಟಂತೆ ಎಂದರು.

ಮುಖ್ಯ ಅತಿಥಿ ಕೆ.ಎಂ.ಸಿ ಯ ಮೂಳೆಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕಿರಣ್ ಆಚಾರ್ಯ ಶುಭ ಹಾರೈಸಿದರು. ಹಿರಿಯ ಕಲಾವಿದ ರಮೇಶ್ ರಾವ್, ಲಲಿತಾ ಕಲಾ ಅಕಾಡೆಮಿಯಲ್ಲಿ ಸದಸ್ಯರಾಗಿ ಉಡುಪಿ ಕಲಾವಿದರಿಗೂ ಅವಕಾಶ ನೀಡಬೇಕೆಂದರು. ವೇದಿಕೆಯಲ್ಲಿ ಗ್ಯಾಲರಿಯ ಮುಖ್ಯಸ್ಥ ಲಿಯಾಖತ್ ಆಲಿ, ಕರಾಮತ್ ಆಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಲಾ ಪ್ರದರ್ಶನ ನಡೆಯಿತು. ಸುಮಾರು 40 ಕಲಾವಿದರಿಗೆ ಕ್ಯಾನ್ ವಾಸ್ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸಕು ಪಾಂಗಾಳ ವಂದಿಸಿ, ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!