ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ಮತ್ತು ಉಡುಪಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ ಸ್ವರ್ಣಾ ಮತ್ತು ಸೀತಾ ನದಿ ಪಾತ್ರಗಳಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕಾರ್ಯವು ಪ್ರಗತಿಯಲ್ಲಿದ್ದು, ಸದರಿ ಮರಳನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ ಉಡುಪಿ ಇ-ಸ್ಯಾಂಡ್ ಆಪ್ ನ ಮೂಲಕ ಪೂರೈಸಲು ತೀರ್ಮಾನಿಸಲಾಗಿರುತ್ತದೆ.
ಅದರಂತೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ/ ಅಭಿವೃದ್ಧಿ ಕಾಮಗಾರಿಗಳಿಗೆ ಮರಳನ್ನು ವಿತರಿಸುವ ಕಾರ್ಯ ಪ್ರಾರಂಭಗೊಂಡಿದ್ದು, ಮರಳು ಅವಶ್ಯಕತೆ ಇರುವವರು ಇ-ಸ್ಯಾಂಡ್ ಆಪ್ ಮುಖಾಂತರ ಪಡೆಯಬಹುದಾಗಿದ್ದು, ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗೆ ಮರಳು ಪೂರೈಸಲು ಅವಕಾಶವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ದೂರವಾಣಿ ಸಂಖ್ಯೆ: 0820-2572333, ಸ್ಯಾಂಡ್ ಆಪ್ ಸಂಪರ್ಕ ಸಂಖ್ಯೆ 6366745888, 6364024555 (ಆಪ್ ಸಂಬಂಧಿತ ಮಾಹಿತಿ) 6366871888 (ಅಕೌಂಟ್ ಸಂಬಂಧಿತ ಮಾಹಿತಿ) ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಭೂವಿಜ್ಞಾನಿ/ ಅನುಷ್ಠಾನಾಧಿಕಾರಿ, ಜಿಲ್ಲಾ 07 ಸದಸ್ಯರ ಸಮಿತಿ (ಸಿ.ಆರ್.ಜಡ್) ಉಡುಪಿ ಜಿಲ್ಲೆ ಅವರ ಪ್ರಕಟಣೆ ತಿಳಿಸಿದೆ.