ಉಡುಪಿ: ಜುಲೈ 29 ಮತ್ತು 30 ರಂದು ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಇಲ್ಲಿ ನಡೆದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಚಾಂಪಿಯನ್ಶಿಪ್ ಅನ್ನು ತನ್ನದಾಗಿಸಿಕೊಂಡಿದೆ.
ದ್ವಿತೀಯ ಸ್ಥಾನವನ್ನು ಆಳ್ವಾಸ್ ಕಾಲೇಜು ಮೂಡುಬಿದರೆ, ತೃತೀಯ ಸ್ಥಾನವನ್ನು ಎಸ್‌ಡಿಎಂ ಕಾಲೇಜು ಉಜಿರೆ, ಚತುರ್ಥ ಸ್ಥಾನವನ್ನು ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು ಪಡೆದುಕೊಂಡಿದೆ.
ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಚಾಂಪಿಯನ್ಶಿಪ್ ಅನ್ನು ಪಡೆದುಕೊಂಡಿದೆ. ದ್ವಿತೀಯ ಸ್ಥಾನವನ್ನು ಕ್ರಾಸ್ ಲ್ಯಾಂಡ್ ಕಾಲೇಜು ಬ್ರಹ್ಮಾವರ, ತೃತೀಯ ಸ್ಥಾನವನ್ನು ಎಸ್‌ಡಿಎಂ ಕಾಲೇಜು, ಚತುರ್ಥ ಸ್ಥಾನವನ್ನು ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು ಪಡೆದುಕೊಂಡಿದೆ. ಸ್ಟ್ರಾಂಗ್ ವಿಮೆನ್ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ಪ್ರತಿಕ್ಷ ಹಾಗೂ ಸ್ಟ್ರಾಂಗ್ ಮೆನ್ ಪ್ರಶಸ್ತಿಯನ್ನು ಎಸ್ಎಂಎಸ್ ಕಾಲೇಜಿನ ಸುಮಂತ್ ಅವರು ಪಡೆದುಕೊಂಡಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ ಶೆಟ್ಟಿ ಎಸ್ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ಕಾಮನ್ವೆಲ್ತ್ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಂತಹ ಪುಷ್ಪರಾಜ್ ಹೆಗ್ಡೆ ಹಾಗೂ ಕೋಟೇಶ್ವರ ಸಹನ ಗ್ರೂಪಿನ ಮಾಲಕರದ ಸುರೇಂದ್ರ ಶೆಟ್ಟಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಮಂಗಳೂರು ವಿವಿ ಪವರ್ ಲಿಫ್ಟಿಂಗ್ ಸ್ಪರ್ಧೆಯ ವೀಕ್ಷಕರಾದ ಶ್ಯಾಮ್ ಸುಂದರ್, ಮಂಗಳೂರು ವಿ ವಿ ದೈಹಿಕ ಶಿಕ್ಷಣ ವಿಭಾಗದ ಉಪ ನಿರ್ದೇಶಕರಾದ ಡಾ. ಹರಿದಾಸ್ ಕೂಳೂರು, ಡಾ. ರೋಷನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕಿ ವಿದ್ಯಾ ಸ್ವಾಗತಿಸಿ, ಡಾ. ರಾಜೇಂದ್ರ ವಂದಿಸಿದರು. ಡಾ. ರಾಮಚಂದ್ರ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು.