ಉಡುಪಿ: ದರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯು ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 5 ರಂದು ಸಿಟಿ ಸೆಂಟರ್ ಮಾಲ್ ನಲ್ಲಿ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಮತ್ತು ಸಾರ್ವಜನಿಕರಿಗಾಗಿ ಗೂಡುದೀಪ ರಚನೆ ಸ್ಪರ್ಧೆಗಳನ್ನು ಆಯೋಜಿಸಿತ್ತು.
ಸುಮಾರು 200 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ರಮೇಶ್ ಕಿದಿಯೂರು, ವಿನ್ಯಾಸ ಹೆಗ್ಡೆ ಸಹಕರಿಸಿದರು.
ಮುಖ್ಯ ಅತಿಥಿಗಳಾಗಿ ಹನೀಫ್ ಹಾಗೂ ತಾರಾವಜಿತ್ (ಸಿಟಿ ಸೆಂಟರ್ ಮಾಲ್), ಮೋಹನ್ (ರಿಲಯನ್ಸ್ ಮಾರ್ಟ್), ರಮಾನಂದಮೂರ್ತಿ (ದರ್ಪಣ ) ಹಾಗೂ ಜಯ ತಂತ್ರಿ (ಸಾನ್ನಿಧ್ಯ ಎಜುಕೇಶನ್ ಟ್ರಸ್ಟ್) ಬಹುಮಾನ ವಿತರಣೆ ಕಾರ್ಯಕ್ರಮ ನೆರವೇರಿಸಿದರು.
ಅನಘ, ಆಕಾಂಕ್ಷಾ, ಪ್ರೇರಣಾರವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನ್ಯೂಸ್ 224 ನ ಕಾರ್ತಿಕ್ ಕುಂದರ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ದರ್ಪಣ ಮುಖ್ಯಸ್ಥೆ ರಕ್ಷಾ ಮತ್ತು ರಮ್ಯಾ ಸ್ವಾಗತಿಸಿ, ವಂದಿಸಿದರು.
ದರ್ಪಣ ನೃತ್ಯ ಸಂಸ್ಥೆಯ ಮಕ್ಕಳು ದಿಲ್ ಸೆ ಡಾನ್ಸ್ ಮೂಲಕ ನಟ ಪುನೀತ್ ರಾಜಕುಮಾರ್ ಅವರಿಗೆ ನೃತ್ಯ ನಮನ ಸಲ್ಲಿಸಿದರು.
ಸ್ಪರ್ಧಾ ವಿಜೇತರ ವಿವರ:
ಚಿತ್ರಕಲಾ ಸ್ಪರ್ಧೆ- ಎಲ್.ಕೆ.ಜಿ – 2ನೇ ತರಗತಿ: ಅದಿತಿ ಭಟ್ ( ಪ್ರಥಮ ), ತೇಜಸ್ವಿ (ದ್ವಿತೀಯ), ಮೊಹಮ್ಮದ್ ರೇಹಾ (ತೃತೀಯ)
3ನೇ-7ನೇ ತರಗತಿ: ದ್ರಿತಿ.ಎಸ್ ( ಪ್ರಥಮ ), ಪ್ರಥಮ್ ಪಿ ಕಾಮತ್ (ದ್ವಿತೀಯ), ಅವನಿ ವಿಜಯ (ತೃತೀಯ)
8ನೇ-10ನೇ ತರಗತಿ: ರಿತಿಕಾ (ಪ್ರಥಮ ), ನಿಶ್ಮಿತಾ ಪ್ರಭು (ದ್ವಿತೀಯ), ಮಾನ್ಯ (ತೃತೀಯ)
ಗೂಡುದೀಪ ರಚನಾ ಸ್ಪರ್ಧೆ:
ಪ್ರಥಮ – ಅದಿತಿ, ವಿದ್ಯಾ, ಉಷಾ
ದ್ವಿತೀಯ – ಆಶ್ಲೇಷ್, ಪ್ರದೀಪ್, ಭೀಮನ ಗೌಡ
ತೃತೀಯ – ಪ್ರತೀಕ್ಷಾ, ಪ್ರೀತಿ, ಶಿಫಾಲಿ