ಉಡುಪಿ: ವೈದ್ಯಕೀಯ ಪ್ರಕೋಷ್ಠ ಉಡುಪಿ ಜಿಲ್ಲೆ ಹಾಗೂ ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಣಿಪಾಲ ಮತ್ತು ವಸಂತಿ ಎ.ಪೈ ಪ್ರತಿಷ್ಠಾನ ಮಣಿಪಾಲ ಇವರ ಸಹಯೋಗದಲ್ಲಿ ಆರೋಗ್ಯಕ್ಕಾಗಿ ಸೈಕ್ಲಿಂಗ್ ಫೆಬ್ರವರಿ 27ರಂದು ಆದಿತ್ಯವಾರ ಬೆಳಿಗ್ಗೆ 6.30ಕ್ಕೆ ಸಿಂಡಿಕೇಟ್ ಸರ್ಕಲ್ ಬಳಿ ಪ್ರಾರಂಭಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದು, ಸುಮಾರು 100 ಜನ ಸೈಕಲ್ ಸವಾರರು ಭಾಗವಹಿಸಲಿದ್ದಾರೆ. ಸೈಕಲ್ ಜಾಥಾ ಜನರಲ್ಲಿ ಆರೋಗ್ಯ ಸುಧಾರಣೆಗಾಗಿ ಸಹಕಾರಿಯಾಗಿದೆ, ಸೈಕಲ್ ಜಾಥಾದಲ್ಲಿ ತರುಣರಿಂದ ವಯಸ್ಕರು ಭಾಗವಹಿಸಲು ಅವಕಾಶವಿದೆ.
ಸೈಕಲ್ ತುಳಿತದಿಂದ ಆರೋಗ್ಯ, ಹೃದಯದ ಆರೋಗ್ಯಕ್ಕೂ ಒಳ್ಳೆಯದು ಆದುದರಿಂದ ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿಗಳಿಂದಾಗಿ ಉಂಟಾಗುವ ರೋಗಗಳನ್ನು ಈ ಸೈಕಲ್ ತುಳಿಯುವುದರಿಂದ ಕಡಿಮೆ ಮಾಡಬಹುದು. ಆದುದರಿಂದ ಸಾರ್ವಜನಿಕರು ತಮ್ಮ ಆರೋಗ್ಯ ದೃಷ್ಟಿಯಿಂದ ಈ ಜಾಥಾದಲ್ಲಿ ಭಾಗವಹಿಸಬಹುದು.
ಜಾಥಾ ಬೆ. 6:30 ಪ್ರಾರಂಭವಾಗಿ ಮಲ್ಪೆ ಸೀ ವಾಕ್ ವರೆಗೆ ನಡೆಯಲಿದೆ. ಆರೋಗ್ಯದ ಬಗ್ಗೆ ಕ್ವಿಜ್ ಸ್ಪರ್ಧೆಯಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಗುವುದು. ತದನಂತರ ಸೈಕಲ್ ಜಾಥಾ ಎಂಜಿಎಂ ಕಾಲೇಜಿನ ಬಳಿ ಸಮಾಪನಗೊಳ್ಳಲಿದೆ.
ಜಾಥಾದಲ್ಲಿ ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಸಂಘಟಕರ ಪ್ರಕಟನೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಚಾಲಕ ಡಾ. ರಾಮಚಂದ್ರ ಕಾಮತ್ 9686694425 ಮತ್ತು ರಾಘವೇಂದ್ರ ಪ್ರಭು ಕರ್ವಾಲು 9880811036 ಸಂಪರ್ಕಿಸಬಹುದಾಗಿದೆ.