ಉಡುಪಿ: ವೈದ್ಯಕೀಯ ಪ್ರಕೋಷ್ಠ ಉಡುಪಿ ಜಿಲ್ಲೆ, ಅಮೋಘ ಹಿರಿಯಡಕ, ಹೆಚ್.ಡಿ.ಎಫ್.ಸಿ ಬ್ಯಾಂಕ್ ಮಣಿಪಾಲ ಶಾಖೆ ಮತ್ತು ವಸಂತಿ ಎ ಪೈ ಪ್ರತಿಷ್ಟಾನ ಮಣಿಪಾಲ ಇದರ ಜಂಟಿ ಆಶ್ರಯದಲ್ಲಿ ಆರೋಗ್ಯಕ್ಕಾಗಿ ಸೈಕ್ಲಿಂಗ್ ಬೃಹತ್ ಜಾಥಾ ಕಾರ್ಯಕ್ರಮ ಸಿಂಡಿಕೇಟ್ ಸರ್ಕಲ್ ಬಳಿ ನಡೆಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಜಾಥಾಗೆ ಚಾಲನೆ ನೀಡಿದರು.
ಮಣಿಪಾಲದಿಂದ ಮಲ್ಪೆ ಬೀಚ್ ವರೆಗೆ ನಡೆದ ಈ ಸೈಕ್ಲಿಂಗ್ ನಲ್ಲಿ ನೂರಾರು ಜನರು ಭಾಗವಹಿಸಿದ್ದು, ಫಿಟ್ ಇಂಡಿಯಾಗಾಗಿ ಆರೋಗ್ಯದ ಬಗ್ಗೆ ವಿವಿಧ ಭಿತ್ತಿಪತ್ರಗಳು ಗಮನ ಸೆಳೆದವು. ಮಲ್ಪೆ ಬೀಚ್ ನಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಆರೋಗ್ಯದ ಕುರಿತು ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು.
ವೈದ್ಯಕೀಯ ಪ್ರಕೋಷ್ಠ ಸಂಚಾಲಕ ಡಾ. ರಾಮಚಂದ್ರ ಕಾಮತ್, ಸಹ ಸಂಚಾಲಕ ಡಾ. ವಿದ್ಯಾಧರ ಶೆಟ್ಟಿ, ಗಣೇಶ್ ನಾಯಕ್, ಸೆಲ್ಕೋ ಸೋಲಾರ್ ಡಿಜಿಎಂ ಜಗದೀಶ್ ಪೈ, ಅಮೋಘ ಸಂಚಾಲಕಿ ಪೂರ್ಣಿಮಾ ಸುರೇಶ್, ಉದಯ ಕುಮಾರ್, ಸುನಾಗ್ ಆಸ್ಪತ್ರೆಯ ಡಾ. ನರೇಂದ್ರ ಕುಮಾರ್ ಹೆಚ್.ಎಸ್, ಡಾ. ವೀಣಾ ನರೇಂದ್ರ , ಡಾ. ರವೀಂದ್ರ , ಮಾಜಿ ತಾ.ಪಂ ಸದಸ್ಯ ಸತ್ಯಾನಂದ ನಾಯಕ್, ಅನಿಲ್ ಶೆಟ್ಟಿ, ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರಿದ್ದರು.
ಪ್ರೋ. ಮೇ.ರಾಧಾಕೃಷ್ಣ ನಿರೂಪಿಸಿದರು. ಜಾಥಾ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಡೆಗಳಲ್ಲಿ ನಡೆಸಲಾಗುವುದು ಎಂದು ಸಂಘಟಕರಾದ ಡಾ. ರಾಮಚಂದ್ರ ಕಾಮತ್ ತಿಳಿಸಿದರು. ಭಾಗವಹಿಸಿದವರಿಗೆ ಪ್ರಮಾಣ ಪತ್ರ ಮತ್ತು ಟೀ. ಶಟ್೯ ನೀಡಲಾಯಿತು.