ಉಡುಪಿ: ಜಿಲ್ಲೆಯಲ್ಲಿ ಕೋಟ್ಪಾ 2003ರ ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ಉಡುಪಿ ತಾಲೂಕಿನ ಹಿರಿಯಡಕ ವ್ಯಾಪ್ತಿಯಲ್ಲಿ ತಂಬಾಕು ಮಾರಾಟದ ಅಂಗಡಿ, ಹೊಟೇಲ್, ರೆಸ್ಟೋರೆಂಟ್‌ಗಳನ್ನು ತಪಾಸಣೆ ಮಾಡಿ ಸೆಕ್ಷನ್ 4, 6 (ಎ) ಮತ್ತು 6 (ಬಿ) ಅಡಿಯಲ್ಲಿ 27 ಪ್ರಕರಣಗಳನ್ನು ದಾಖಲಿಸಿ 3100 ರೂಗಳನ್ನು ದಂಡ ವಸೂಲಿ ಮಾಡಲಾಗಿದೆ ಮತ್ತು ಸೆಕ್ಷನ್ 4, 6(ಎ)ರ ಅನ್ವಯ ನಾಮಫಲಕಗಳನ್ನು ವಿತರಿಸಲಾಗಿದೆ.
ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ್, ಹಿರಿಯ ಆರೋಗ್ಯ ಮೇಲ್ವಿಚಾರಕ ಸತೀಶ್ ರಾವ್, ಹಿರಿಯ ಆರೋಗ್ಯ ಸಹಾಯಕ ದೇವಪ್ಪ ಪಟಗರ್, ತಾಲೂಕು ಪ್ರಾಥಾಮಿಕ ಶಿಕ್ಷಣಾಧಿಕಾರಿ ಎಚ್ ಗೋಪಾಲ ಶೆಟ್ಟಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಘಟಕದ ಎನ್.ಟಿ.ಸಿ.ಪಿ, ಮಂಜುಳಾ ಶೆಟ್ಟಿ, ಶೈಲಾ ಶಾಮನೂರು, ಡಾ. ಅಂಜಲಿ, ಹಿರಿಯಡಕ ಆರಕ್ಷಕ ಚಂದ್ರಕಾಂತ್ ಉಪಸ್ಥಿತರಿದ್ದರು.