ಉಡುಪಿ: ದೇಶಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಂತಿಧೂತ ಏಸುಕ್ರಿಸ್ತರ ಜನ್ಮದಿನದ ಶುಭ ಸಂದರ್ಭದಲ್ಲಿ ದೇಶಾದ್ಯಂತ ಕ್ರೈಸ್ತ ಸಮುದಾಯದವರು ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಕ್ರಿಸ್ಮಸ್ ಅಂಗವಾಗಿ ಜನತೆಗೆ ಶುಭಾಶಯ ಕೋರಿದರು.

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಕ್ರಿಸ್ಮಸ್ ಆಚರಣೆ ನಡೆಯಿತು. ಉಡುಪಿ ಶೋಕಮಾತಾ ಚರ್ಚ್, ಮೌಂಟ್ ರೋಸರಿ ಚರ್ಚ್, ಕಟಪಾಡಿ ಶಂಕರಪುರದ ಸಂತ ಜೋನರ ಚರ್ಚ್, ಕಲ್ಯಾಣಪುರ ಸೇರಿದಂತೆ ಜಿಲ್ಲೆಯ ಚರ್ಚ್ ಗಳಲ್ಲಿ ನಿರ್ಮಿಸಲಾದ ಕ್ರಿಸ್ಮಸ್ ಗೋದಲಿ ಆಕರ್ಷಣೆಯ ಕೇಂದ್ರವಾಗಿದೆ.
ಕ್ರಿಸ್ಮಸ್ ಪ್ರಯುಕ್ತ ವಿಶೇಷ ಬಲಿಪೂಜೆಗಳು ನಡೆಯಿತು. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಹಬ್ಬದ ಆಚರಣೆ ನಡೆಯಿತು.