ಬ್ರಹ್ಮಾವರ: ಚೈತನ್ಯ ಯುವಕ ಮಂಡಲ (ರಿ.) ನೀಲಾವರ ಇವರ ಆಶ್ರಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ನೀಲಾವರದಲ್ಲಿ ಮೂರು ವಾರಗಳ ಉಚಿತ ಫಿಟ್ನೆಸ್ ಕ್ಯಾಂಪ್ ಆಯೋಜಿಸಲಾಯಿತು.
ಯುವಕ ಮಂಡಲದ ಅಧ್ಯಕ್ಷ ಶ್ಯಾಮರಾಯ ಆಚಾರ್ಯ ಇವರು ಉದ್ಘಾಟನೆ ನೆರವೇರಿಸಿದರು. ಯುವಕ ಮಂಡಲದ ಕ್ರೀಡಾ ಕಾರ್ಯದರ್ಶಿ ಹಾಗೂ ಆಮೇಚುರ್ ಕಬಡ್ಡಿ ಅಸೋಸಿಯೇಷನ್ ಉಡುಪಿ ಇದರ ರಾಜ್ಯಮಟ್ಟದ ಕಬಡ್ಡಿ ತೀರ್ಪುಗಾರ ಕರುಣಾಕರ್ ರಾವ್ ನೀಲಾವರ ತರಬೇತಿ ನೀಡಿದ ಕ್ಯಾಂಪ್ ನಲ್ಲಿ ದೈಹಿಕ ಅರೋಗ್ಯ ಮತ್ತು ಕ್ರೀಡೆಗೆ ಅವಶ್ಯಕವಾದ ಸರಳ ಸೂತ್ರಗಳ ವ್ಯಾಯಾಮಗಳನ್ನು ಕಲಿಸಲಾಯಿತು.
ಚೈತನ್ಯ ಯುವಕ ಮಂಡಲದ ಅಧ್ಯಕ್ಷ ಶ್ಯಾಮರಾಯ ಆಚಾರ್ಯ, ಕಾರ್ಯದರ್ಶಿ ಹರೀಶ್ ಆಚಾರ್ಯ, ಖಜಾಂಚಿ ಮಧುಸೂಧನ್ ದೇವಾಡಿಗ ಹಾಗೂ ಇತರ ಸದಸ್ಯರ ಜೊತೆ ಎಂ.ಎಂ.ಸಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರೂ ಭಾಗವಹಿಸಿ ಪ್ರಯೋಜನ ಪಡೆದರು.
ಸಮಾರೋಪದಲ್ಲಿ ಉಪನ್ಯಾಸಕ ಪ್ರಶಾಂತ್ ನೀಲಾವರ ಮಾತನಾಡಿ, ಇಂತಹ ಫಿಟ್ನೆಸ್ ಕ್ಯಾಂಪ್ ನ ಪ್ರಯೋಜನ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಡೆದುಕೊಳ್ಳುವಂತಾಗಬೇಕು ಎಂದು ಸಲಹೆಯಿತ್ತರು.