ಉಡುಪಿ: ಜಗತ್ತಿನ ಅತಿ ದೊಡ್ಡ ಚಿನ್ನ ಮತ್ತು ವಜ್ರಾಭರಣಗಳ ರಿಟೇಲ್ ಮಾರಾಟದ ಸಂಸ್ಥೆಯಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಇದರ ಅಪ್ಪಟ ಭಾರತೀಯ ಸಂಸ್ಕೃತಿಯ ಸಾಂಪ್ರದಾಯಿಕ ಒಡವೆಗಳ ಅನಾವರಣ ಕಾರ್ಯಕ್ರಮವು ಗೀತಾಂಜಲಿ ಶೋಪರ್ ಸಿಟಿಯಲ್ಲಿರುವ ಉಡುಪಿ ಮಳಿಗೆಯಲ್ಲಿ ರೂಪದರ್ಶಿಗಳಾದ ಮಿಸ್ಟರ್ ಅಂಡ್ ಮಿಸ್ ಟೀನ್ ಇಂಡಿಯಾ ಶಿರಿಯನ್ ನಿಖಿತಾ ಜೋಸೆಫ್, ಟೀಮ್ ಕರ್ನಾಟಕ 2021 ದಿಶಾಲಿ, ಭರತ ನಾಟ್ಯ ವಿದುಷಿ ಸಂಸ್ಕೃತಿ, ಟಾಪ್ ಮಾಡೆಲ್ ಆಫ್ ಇಂಡಿಯಾ ಸ್ಪರ್ಧಿ ಲಿಖಿತ ಇವರು ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನವನ್ನು ಉದ್ಘಾಟಿಸಿದರು. ಭಾರತದ ವಿವಿಧ ಭಾಗಗಳಿಂದ 13 ವಧುಗಳ ಆಭರಣಗಳ ವಿನ್ಯಾಸಗಳುಳ್ಳ ವಿವಾಹ ಗೀತೆ ಅನಾವರಣಗೊಳಿಸಲಾಯಿತು.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವ್ಯಾಪಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಎಂದೆಂದಿಗೂ ಬದ್ಧವಾಗಿದ್ದು ತನ್ನ ಗ್ರಾಹಕರಿಗೆ 10 ಭರವಸೆಯನ್ನು ನೀಡುತ್ತಿದೆ. ಈ ಬದ್ಧತೆಯಲ್ಲಿ ನಿಖರವಾದ ಉತ್ಪಾದನಾ ವೆಚ್ಚ, ಹರಲಿನ ಶುಲ್ಕ , ಆಭರಣಗಳ ಶುಲ್ಕ, ಆಭರಣಗಳ ಜೀವಿತಾವಧಿಯ ನಿರ್ವಹಣೆ, ಹಳೆಯ ಚಿನ್ನದ ಆಭರಣಗಳ ಮರು ಮಾರಾಟ ಸಂದರ್ಭದಲ್ಲಿ ಚಿನ್ನಕ್ಕೆ 100 ಪ್ರತಿಶತ ಮೌಲ್ಯ, ಮತ್ತು ವಿನಿಮಯ ಶೂನ್ಯ ಕಡಿತವನ್ನು ಸೂಚಿಸುವ ಪಾರದರ್ಶಕ ಬೆಲೆಯೂ ಸೇರಿದೆ. ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸುವ ಶೇ 100 ಬಿಸ್ ಹಾಲ್ ಮಾರ್ಕಿಂಗ್, ಐಜಿಐ ಮತ್ತು ಜಿಐಎ ಪ್ರಮಾಣೀಕೃತ ವಜ್ರಗಳು ಜಾಗತಿಕ ಮಟ್ಟದಲ್ಲಿ 28 ಆಂತರಿಕ ಗುಣಮಟ್ಟದ ಪರಿಶೀಲನೆ ಮರು ಪಾವತಿಯ ಖಾತರಿ ಮತ್ತು ಜವಾಬ್ದಾರಿಯುತ ಮೂಲಗಳು ಮತ್ತು ನ್ಯಾಯಯುತ ಕಾರ್ಮಿಕ ಪದ್ದತಿಯನ್ನು ಖಾತ್ರಿಪಡಿಸುತ್ತದೆ.
ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್, ಮಾರ್ಕೆಟಿಂಗ್ ಮ್ಯಾನೇಜರ್ ರಾಘವೇಂದ್ರ ನಾಯಕ್, ತಂಝೀಮ್ ಶಿರ್ವ ಸಿಬ್ಬಂದಿ ವರ್ಗ, ಗ್ರಾಹಕರು ಉಪಸ್ಥಿತರಿದ್ದರು.