ಕಾರ್ಕಳ: ಅಕ್ಟೋಬರ್ ತಿಂಗಳನ್ನು ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾಗಿ ಆಚರಿಸಲಾಗುತ್ತದೆ. ಇದರ ಪ್ರಯುಕ್ತ ಶಾರದಾ ಮಹಿಳಾ ಮಂಡಲ ಅನಂತಶಯನ ವತಿಯಿಂದ ಸದಸ್ಯೆಯರಿಗಾಗಿ ಮಾಹಿತಿ ಕಾರ್ಯಕ್ರಮವನ್ನು
ನಡೆಸಲಾಯಿತು.
ಕಾರ್ಕಳದ ಸರಕಾರಿ ಅಸ್ಪತ್ರೆಯ ರೇಡಯೊಲಜಿಸ್ಟ್ ಡಾ.ಅನಿತಾ ಪ್ರಭು ರವರು ಸ್ತನ ಕ್ಯಾನ್ಸರ್ ಆರಂಭದಲ್ಲಿ ಗುರುತಿಸುವುದು ಹೇಗೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 40 ವರ್ಷದ ನಂತರ ಮಹಿಳೆಯರು ಕಡ್ಡಾಯವಾಗಿ ಮೆಮೊಗ್ರಾಫಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ, ರೋಗ ಪತ್ತೆ ಹಾಗೂ ಚಿಕಿತ್ಸೆ ಸುಲಭವೆಂದು ವೈದ್ಯರು ಕಿವಿಮಾತು ಹೇಳಿದರು.
ಶಾಂತಲಾ ಫಾಟಕ್, ಸೀಮಾ ಶೆಟ್ಟಿ, ಪ್ರಾರ್ಥಿಸಿದರು, ಅಧ್ಯಕ್ಷೆ ವಾರಿಜಾ ಕಾಮತ್ ಸ್ವಾಗತಿಸಿ, ಸಾಧನಾ ಅಶ್ರಿತ್ ವಂದಿಸಿದರು. ಉಮಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ವಿನಯಾ ಫಾಟಕ್ ರವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷೆ ಉಮಾ ಚಿಪ್ಳುಣಕರ್ ಹಾಗೂ ಕಾರ್ಯದರ್ಶಿ ಡಾ ಹರ್ಷಾ ಕಾಮತ್ ಉಪಸ್ಥಿತರಿದ್ದರು. ಮಂಡಳಿಯ ಸದಸ್ಯೆ, ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್ ವಿಜೇತೆ ಸಾಧನಾ ಜಿ. ಆಶ್ರೀತ್ ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.