ಕೋಟ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇವರ ಪ್ರಕಾಶನದಲ್ಲಿ ಶೈಲಜಾ ಸದಾಶಿವ ಅಡಿಗ ಅವರಿಂದ ಭಗವದ್ಗೀತೆ, ವಿಷ್ಣು ಸಹಸ್ರನಾಮ, ಭೀಷ್ಮಸ್ತವರಾಜ, ಗಜೇಂದ್ರ ಮೋಕ್ಷ, ಹಾಗೂ ಅನುಸ್ಮೃತಿಯ ಭಾವಾನುವಾದ ಹಾಗೂ ಫಲಶೃತಿಯನ್ನು ಒಳಗೊಂಡ ಪುಸ್ತಕ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಂಡಿತು. ಯೋಗ ಗುರು ವಿದ್ವಾನ್ ಡಾ| ವಿಜಯಕುಮಾರ್ ಮಂಜರ್ ಪುಸ್ತಕವನ್ನು ಬಿಡುಗಡೆಗೊಳಿಸಿ ಪ್ರತಿಯೊಬ್ಬರು ಜೀವನದಲ್ಲಿ ಭಗವದ್ಗೀತೆಯನ್ನು ಓದಿ ಅರ್ಥೈಸಿಕೊಳ್ಳುವುದು ಅತಿ ಅವಶ್ಯಕ ಎಂದರು.
ಗುಂಡ್ಮಿ ಶಂಕರನಾರಾಯಣ ಅಡಿಗರು ಕೃತಿ ಪರಿಚಯಿಸಿದರು. ಸಭೆಯಲ್ಲಿ ಸಂಸ್ಕೃತಿ ಪ್ರತಿಷ್ಠಾನ ಗೌರವಾಧ್ಯಕ್ಷರಾದ ಯು ವಿಶ್ವನಾಥ ಶೆಣೈ, ವಾಸುದೇವಾಚಾರ್ಯ, ಪಶುಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗಣೇಶ್ ಭಟ್, ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗಣೇಶ್ ಭಟ್ ಇನ್ನಿತರರು ಉಪಸ್ಥಿತರಿದ್ದರು.
ಶೈಲಾ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಉಪಾಧ್ಯಕ್ಷ ವಿಘ್ನೇಶ್ವರ ಅಡಿಗ ಕಾರ್ಯಕ್ರಮ ನಿರೂಪಿಸಿದರು.