ಮಲ್ಪೆ: ರೋಟರಿ ಕ್ಲಬ್ ಮಣಿಪಾಲ ಮತ್ತು ರೋಟರಾಕ್ಟ ಕ್ಲಬ್ ಮಣಿಪಾಲ ಸೆಂಟ್ರಲ್ ಇವುಗಳ ಸಹಯೋಗದಲ್ಲಿ ಇನ್ನಿತರ ರೋಟರಾಕ್ಟ ಕ್ಲಬ್ ಗಳು, ಸಾಹಸ್ ಸಂಸ್ಥೆ, ಎಸ್.ಡಿ.ಎಂ. ಕಾಲೇಜು, ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಾಲೇಜು, ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರ ಭಾಗವಹಿಸುವಿಕೆಯಲ್ಲಿ ಇಂದು ಪಡುಕರೆ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.
ರೋಟರಾಕ್ಟ್ ಕ್ಲಬ್ ಮಣಿಪಾಲ ಸೆಂಟ್ರಲ್ ನ ಅಧ್ಯಕ್ಷೆ ರೇಷ್ಮ ಮಾತನಾಡಿ, ಈ ರೀತಿಯ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ನಿರಂತರವಾಗಿ ತಿಳಿಸಿದರು. ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ, ಶುಭಾ ರಾವ್, ಶ್ರವಣ್ ಬಾಸ್ರಿ, ಮಹಾಲಸ ಕಿಣಿ, ಅಮಿಶಾ, ಶ್ರುತಿ ರಾವ್, ಪ್ರಥಮ್ ನಾಯಕ್, ಮಂಥನ್ ಕಿಣಿ, ನುಮನ್, ಯಶಸ್, ಪ್ರಜ್ಞಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.