ಬೈಲಕೆರೆ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೈಲಕೆರೆ ಯುವಕ ಮಂಡಲ (ರಿ.) ವತಿಯಿಂದ ಬೈಲಕೆರೆ ಯುವಕ ಮಂಡಲದ ಸೇವಾ ಮಾಹಿತಿ ಕೇಂದ್ರದಲ್ಲಿ ಸರಕಾರದ ಯೋಜನೆಗಳ ಮಾಹಿತಿ ಹಾಗೂ ಸಂಬಂಧಪಟ್ಟ ದಾಖಲಾತಿಗಳ ಸಮಗ್ರ ಮಾಹಿತಿ ನೀಡಲಾಗುವ ಉದ್ದೇಶದಿಂದ ಬೈಲಕೆರೆ ಮಾಹಿತಿ ಸೇವಾ ಕೇಂದ್ರ ಹಾಗೂ ರಸ್ತೆ ಸುರಕ್ಷತಾ ಕಾನ್ವೆಕ್ಸ್ ಮಿರರ್ ಇದರ ಲೋಕಾರ್ಪಣ ಕಾರ್ಯಕ್ರಮ ನಡೆಯಿತು.
ಬೈಲಕೆರೆ ಸೇವಾ ಕೇಂದ್ರದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಉಡುಪಿ ತಾ.ಪಂ. ಕಾರ್ಯನಿರ್ವಣಾಧಿಕಾರಿ ಮೋಹನ್ ರಾಜ್, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಪ್ರೀಮಾ ಲವೀನ, ಅಂಗನವಾಡಿ ಶಿಕ್ಷಕಿ ಸುನೀತಾ, ಆಶಾ ಕಾರ್ಯಕರ್ತೆ ಲೀಲ, ಯುವಕ ಮಂಡಲ ಅಧ್ಯಕ್ಷ ಶ್ರೀಜಿತ್ ಬೈಲಕೆರೆ ಮುಂತಾದವರು ಉಪಸ್ಥಿತರಿದ್ದರು.