ಉಡುಪಿ, ಸೆ.28: ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ ಕುಕ್ಕೆಸುಬ್ರಹ್ಮಣ್ಯ, ಇದರ ವತಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ, ಪುರಾತತ್ತ್ವ, ಪ್ರವಾಸೋದ್ಯಮ ಮತ್ತು ಇನ್ನೂ ಅಜ್ಞಾತದಲ್ಲಿರುವ ನೆಲೆಗಳು, ಸ್ಮಾರಕಗಳು, ಚಾರಿತ್ರಿಕ ಅವಶೇಷಗಳ ಕುರಿತಾಗಿ ಲೇಖನಗಳನ್ನು ಆಹ್ವಾನಿಸಿದ್ದು, ಇದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಇತಿಹಾಸ ಆಸಕ್ತರಿಗೆ ಸದಾವಕಾಶವಾಗಿದೆ. ಈ ಮೂಲಕ ಕಾಲಗರ್ಭದಲ್ಲಿ ಹುದುಗಿಹೋದ ಇನ್ನಷ್ಟು ಚಾರಿತ್ರಿಕ ವಿಚಾರಗಳನ್ನು ಇತಿಹಾಸದ ಪುಟಕ್ಕೆ ಸೇರಿಸುವ ಪ್ರಯತ್ನ ನಡೆಯಲಿದೆ. ಪ್ರತಿ ತಿಂಗಳ ದಿನಾಂಕ 20 ರ ಒಳಗೆ ಲೇಖನಗಳು ತಲುಪುವಂತೆ ಕಳುಹಿಸಿಕೊಡಬೇಕಾಗಿ ಪ್ರಕಟಣೆ ತಿಳಿಸಿದೆ.
ಇತಿಹಾಸ ಲೇಖನಗಳಿಗೆ ಆಹ್ವಾನ

ಇತಿಹಾಸ ಲೇಖನಗಳಿಗೆ ಆಹ್ವಾನ
Date: