Saturday, January 18, 2025
Saturday, January 18, 2025

ಕ್ರೇಜಿ ಅಭಿಮಾನಿ

ಕ್ರೇಜಿ ಅಭಿಮಾನಿ

Date:

ಗಿರಿಯಾದ ಝರಕೋ ನಗರದಲ್ಲಿ ಫುಟ್ಬಾಲ್ ಪಂದ್ಯ ಒಂದರಲ್ಲಿ ರೆಫ್ರಿ ವಿವಾದಾತ್ಮಕ ತೀರ್ಪಿನಿಂದ ಎರಡು ಪಂದ್ಯದ ಅಭಿಮಾನಿಗಳ ನಡುವೆ ಹೊಡೆದಾಟದಲ್ಲಿ ನೂರಕ್ಕಿಂತ ಅಧಿಕ ಮಂದಿ ಸಾವಿಗೀಡಾದ ಘಟನೆ ಇತ್ತಿಚಿಗೆ ನಡೆಯಿತು. ಇದಕ್ಕೇನು ಹೇಳುವುದು. ಆ್ಯಕ್ಟರ್ ರಾಜ್ ಅವರ ದೊಡ್ಡ ಅಭಿಮಾನಿಯಾದ ಸುರೇಶ ರಾಜರವರ ಫೋಟೋ ಮನೆಯಲ್ಲಿ ಪೂಜಿಸುತ್ತಿದ್ದರು. ಮೊಬೈಲ್ ನಲ್ಲಿ ಫೋಟೋ ಇದೆ. ಮಾತನಾಡುವುದು ಬರೀ ರಾಜ ಅವರ ಬಗ್ಗೆ. ರಾಜ್ ಏನು ಮಾಡಿದರು ಅದೇ ಸರಿ. ಅವರ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ. ರಾಜರವರ ಒಂದು ಫಿಲ್ಮ್ ಅನೇಕ ಬಾರಿ ನೋಡಿ ಅದು ಬಾಯಿಪಾಠವಾಗಿಬಿಟ್ಟಿದೆ.

ಸಿನಿಮಾದಲ್ಲಿ ಹೀರೋ ಆದ ರಾಜ ತನ್ನ ನಿಜ ಜೀವನದಲ್ಲಿ ಅನೇಕ ಸಮಸ್ಯೆಗಳಿದ್ದವು. ಹೆಂಡತಿ ಜೊತೆ ಹೊಂದಾಣಿಕೆ ಸಮಸ್ಯೆ, ಕುಡಿಯುವ ಚಟ, ಹಣ ಪೋಲ್ ಮಾಡೋದು ಅವರ ಚಟವಾಗಿತ್ತು. ಇವೆಲ್ಲವೂ ಗೊತ್ತಿದ್ದರೂ ಸುರೇಶನು ಅದನ್ನೇಲ್ಲಾ ಸರಿ ಎಂದು ಸಮರ್ಥಿಸುತ್ತಿದ್ದನು. ಗೆಳೆಯರ ಜೊತೆ ಅನೇಕ ಬಾರಿ ವಾಗ್ದಾನ ಹೊಡೆದಾಟವೂ ಆಗಿತ್ತು. ನನ್ನ ರಾಜ ಅವರಿಗೆ ಏನು ಹೇಳಲು ಬಾರದು, ಅವರು ನನ್ನ ಪಾಲಿಗೆ ದೇವರು, ತಡೆಯಲು ಹೋದರೆ ಸುರೇಶನಿಗೆ ಎಲ್ಲಿದ ಕೋಪ ಬಂದು ರಾಕ್ಷಸನಂದೇ ಆಗಿಬಿಡುತ್ತಿದ್ದ. ಇದನ್ನು ಬಲ್ಲವರು ಅವನ ಪಾಡಿಗೆ ಬಿಡುತ್ತಿದ್ದರು.

ಇಲ್ಲಿ ಎರಡು ಘಟನೆಗಳು ಮಾತ್ರವಲ್ಲದೆ ಈ ರೀತಿಯ ಅಭಿಮಾನಿಗಳು ಚಿತ್ರರಂಗ, ಕ್ರೀಡಾಪಟು, ರಾಜಕಾರಣ, ಹೀಗೆ ಅನೇಕ ಕ್ಷೇತ್ರದಲ್ಲಿ ನೋಡುತ್ತೇವೆ. ಇಲ್ಲಿ ಅಭಿಮಾನಿಯ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂದರೆ ಅವರ ಅಭಿಮಾನಿ ತಾನೇ ಆಗಿಬಿಡುತ್ತಾರೆ. ಅವರ ಅಭಿಮಾನಿಗಳಿಗೆ ಆಗುವ ಅನುಭವಗಳು ಸ್ವಂತ ಅನುಭವಿಸುತ್ತಿರುತ್ತಾರೆ. ಉದಾಹರಣೆಗೆ ಸುರೇಶನ ಆಕ್ಟರ್ ರಾಜನ ವಿಷಯಕ್ಕೆ ಬಂದಾಗ ರಾಜವೇ ಆಗಿ ಮನಸ್ಸು ಬದಲಾಗುತ್ತದೆ. ಡಾ. ರಾಜ್ ಅವರಿಗೆ ಆದ ಸಮಸ್ಯೆ ಸುರೇಶ ತನ್ನ ಸಮಸ್ಯೆ ಎಂದು ನೋಡುತ್ತಾನೆ. ರಾಜ್ ಅವರು ವ್ಯಕ್ತಿಯ ಬೇರೆ ಸುರೇಶನೇ ಬೇರೆ ವ್ಯಕ್ತಿ ಎಂದು ಪರಿಗಣಿಸುವುದಿಲ್ಲ. ರಾಜನಂತೆ ನಟಿಸುವುದು ಮಾತಾನಾಡುವುದು ರಾಜ ಅವರ ವಿಷಯ ಬಿಟ್ಟಾಗ ಸುರೇಶ ತನ್ನ ಸ್ವಂತ ವ್ಯಕ್ತಿತ್ವಕ್ಕೆ ಮರಳುತ್ತಾನೆ.

ಈ ರೀತಿ ಸಮಾಜದಲ್ಲಿ ಅನೇಕರನ್ನು ನಾವು ಕಾಣುತ್ತೇವೆ. ಪಟ್ಟ ಅಭಿಮಾನಿ ಎಂದು ಹೊಗಳುತ್ತೇವೆ ಕೂಡ. ಅಭಿಮಾನ ಇರುವುದು ಒಳ್ಳೆಯದೇ ಆದರೆ ಯಾವುದು ವಿಪರ್ಮಿತ ಆಗಬಾರದು ಅಲ್ಲವೇ. ಇಷ್ಟಪಡಿ, ಸ್ಪೂರ್ತಿಯನ್ನು ಪಡೆಯಿರಿ ಆದರೆ ಸ್ವಂತ ವ್ಯಕ್ತಿತ್ವವನ್ನು ಇಟ್ಟುಕೊಳ್ಳಿ. ಅಭಿಮಾನಿ ಎಂದ ಮಾತ್ರಕ್ಕೆ ಆ ವ್ಯಕ್ತಿಯನ್ನು ತನ್ನೊಳಗೆ ಸೇರಿಸುವುದು ಹಾನಿಕಾರಕ. ಮುಂದೆ ತನಗು ಹಾನಿ ಹಾಗೂ ಸಂಬಂಧಗಳಿಗೂ ಹಾನಿ. ತಾವೇ ಬೇರೆ ತಮ್ಮ ಅಭಿಮಾನಿಗಳ ಜೀವನವೇ ಬೇರೆ ಎಂದು ತಿಳಿಯಬೇಕಿದೆ. ಹುಚ್ಚು ಅಭಿಮಾನವನ್ನು ಬಿಡಿರಿ.

ಡಾ. ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!