Tuesday, October 8, 2024
Tuesday, October 8, 2024

ಬಳ್ಳಮಂಜ: 14-15 ನೇ ಶತಮಾನದ ಶಾಸನದ‌ ಅಧ್ಯಯನ

ಬಳ್ಳಮಂಜ: 14-15 ನೇ ಶತಮಾನದ ಶಾಸನದ‌ ಅಧ್ಯಯನ

Date:

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಬಳ್ಳಮಂಜದ ಶ್ರೀ ಮಹಾತೋಭಾರ ಅನಂತೇಶ್ವರ ದೇವಾಲಯದ ಆವರಣದಲ್ಲಿ 14-15ನೇ ಶತಮಾನಕ್ಕೆ‌ ಸೇರಿದ ಶಾಸನವನ್ನು ಸಂದೇಶ್ ಜೈನ್ ಅವರ ಮಾಹಿತಿಯ ಮೇರೆಗೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ‌ – ಉಡುಪಿ (ಎನ್‌.ಟಿ.ಸಿ – ಎ.ಒ.ಎಂ ನ ಅಂಗ ಸಂಸ್ಥೆ) ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್‌.ಎ.ಕೃಷ್ಣಯ್ಯ ಅವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ‌ಮೂಡುಬೆಳ್ಳೆ ಅವರು ಅಧ್ಯಯನ ಮಾಡಿರುತ್ತಾರೆ.‌

ಶಾಸನವನ್ನು ಈ‌ ಮೊದಲು ಹಿರಿಯ ಸಂಶೋಧಕರಾದ ಡಾ. ಎಸ್.ಡಿ.ಶೆಟ್ಟಿ ಅವರು ಗಮನಿಸಿದ್ದು ಇದರ ಬಗ್ಗೆ ‌ಸರಳವಾದ ಮಾಹಿತಿಯನ್ನು ದೇವಾಲಯದ ಕೃತಿಯಲ್ಲಿ ನೀಡಿರುತ್ತಾರೆ. ಇವರು ದೇವಾಲಯದಲ್ಲಿ ಮೂರು ಶಾಸನಗಳಿವೆ ಎಂದು ತಿಳಿಸಿದ್ದು, ಒಂದು ಶಾಸನವು ಪ್ರಕಟಣೆಯಾಗಿರುತ್ತದೆ.

ಪ್ರಸ್ತುತ ಈ ಶಾಸನವು ಹೊಸದಾಗಿ ಪತ್ತೆಯಾಗಿದ್ದು ಇನ್ನೊಂದು ಶಾಸನವು ಎಲ್ಲಿದೆ ಎಂದು ತಿಳಿದುಬಂದಿಲ್ಲ. ಗ್ರಾನೈಟ್ ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ತುಂಡಾಗಿದ್ದು ಎರಡೂ ಬದಿಗಳಲ್ಲಿ ಕನ್ನಡ ಲಿಪಿಗಳಿವೆ. ಶಾಸನದ‌ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು ಉಳಿದಿರುವ ಲಿಪಿಯ ಆಧಾರದ ‌ಮೇಲೆ‌ ಈ ಶಾಸನವು 14-15ನೇ‌ ಶತಮಾನಕ್ಕೆ ಸೇರಿದೆ ಎಂದು‌ ಹೇಳಬಹುದು.

ಶಾಸನದ ಪ್ರಕಾರ ಬಳ್ಳಮಂಜದ ದೇವರಿಗೆ ಕಂನಿಯಂಣ ಸೆಟಿ ಮತ್ತು ಬೆಳತಂಗಡಿ (ಬೆಳ್ತಂಗಡಿ) ಯ ಬೀರ‌ ಸೆನಭೋವನ ಮಗ ಕಾಂತಣ್ಣ‌ ಸೆನಭೋವನು ಮಾಡಿದ ಧರ್ಮದ ಬಗ್ಗೆ ಮಾಹಿತಿಯಿದೆ. ಶಾಸನದಲ್ಲಿ ಬಳ್ಳಮಂಜ ದೇವರಿಗೆ ಬಿಟ್ಟ ಭೂಮಿಯ ವಿವರ ಹಾಗೂ ಬ್ರಾಹ್ಮಣ ಭೋಜನಕ್ಕೆ ‌ಕೊಟ್ಟ ವಿವರಗಳನ್ನು ಉಲ್ಲೇಖಿಸಲಾಗಿದೆ. ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ವಿಜಯ್ ಆಚಾರ್ಯ ‌ಇರ್ವತ್ತೂರು ಹಾಗೂ ದೇವಾಲಯದ ಆಡಳಿತ ಮಂಡಳಿಯವರು ಸಹಕಾರ ನೀಡಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಿಒಡಿಪಿ: ಮಕ್ಕಳ ಶಿಬಿರ

ಮಂಗಳೂರು, ಅ.8: ಮಂಗಳೂರು ಧರ್ಮಪ್ರಾಂತ್ಯದ ಸಿಒಡಿಪಿ ಸೇವಾ ಸಂಸ್ಥೆಯಲ್ಲಿ ಮಕ್ಕಳ ಶಿಬಿರ...

ಗಂಗೊಳ್ಳಿ: ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ

ಕುಂದಾಪುರ, ಅ.8: ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳು ಮತ್ತು ಸ.ವಿ ಹಳೆ...

ಗಣೇಶ್ ಪ್ರಸಾದ್ ಜಿ. ನಾಯಕ್ ಅವರಿಗೆ ಪಿ.ಎಚ್.ಡಿ

ಉಡುಪಿ, ಅ.7: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ...

ಉಡುಪಿ: ದಿಢೀರ್ ಮಳೆ; ಸಿಡಿಲಾರ್ಭಟ

ಉಡುಪಿ, ಅ.7: ಉಡುಪಿ ಜಿಲ್ಲೆಯ ಹಲವೆಡೆ ಸಂಜೆ ದಿಢೀರನೆ ಸುರಿದ ಗಾಳಿ...
error: Content is protected !!