ಉಡುಪಿ: ಉಡುಪಿ ಜಿಲ್ಲಾ ವರ್ತಕರ ಸಂಘದ ವತಿಯಿಂದ ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಲೋಕಕಲ್ಯಾಣಾರ್ಥಕ್ಕಾಗಿ ಸೀಯಾಳ ಅಭಿಷೇಕ ನೆಡೆಯಿತು. ಸಂಸ್ಥೆಯ ವತಿಯಿಂದ 50 ಲೀ. ಸಾಮರ್ಥ್ಯದ ನೀರಿನ ಡ್ರಮ್ ನೀಡಲಾಯಿತು.
ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ, ಉಪಾಧ್ಯಕ್ಷ ವಸಂತ, ಕಾರ್ಯದರ್ಶಿ ನಾಗರಾಜ್ ಅಡಿಗ, ವಿಶ್ವನಾಥ್ ಗಂಗೊಳ್ಳಿ, ದೇವಳದ ಅರ್ಚಕ ವಾಸುದೇವ ಉಪಾಧ್ಯ, ಮಾಯಾ ಕಾಮತ್, ಗಣೇಶ್ ಗಂಗೊಳ್ಳಿ, ಕ್ರೀಡಾಪಟು ಅರುಣಕಲಾ, ಅನುಶ್ರೀ, ಶ್ರೀಧರ್ ನಾಯಕ್ ಉಪಸ್ಥಿತರಿದ್ದರು.