ಬೆಳ್ಮಣ್ಣು: ತಂತ್ರಜ್ಞಾನದ ಸದ್ಬಳಕೆಯನ್ನು ಮಾಡಿದರೆ ಅದ್ಭುತವನ್ನೇ ಸೃಷ್ಟಿಸಬಹುದು ಎಂಬುದಕ್ಕೆ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸರಿಯಾದ ಉದಾಹರಣೆ ಎಂದರೆ ಅತಿಶಯೋಕ್ತಿ ಆಗದು. ಕಳೆದ 21 ವರ್ಷಗಳಿಂದ ನಿರಂತರವಾಗಿ ವಿಶಿಷ್ಠ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಪರಿಸರದ ಜನರ ಮನಸ್ಸನ್ನು ಗೆದ್ದಿರುವ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್, ಲಾಕ್‌ಡೌನ್ ಸಂದರ್ಭದಲ್ಲೂ ನಿರಂತರವಾಗಿ 50 ಆನ್‌ಲೈನ್ ಕಾರ್ಯಕ್ರಮ ನಡೆಸುವ ಮೂಲಕ ಹಲವಾರು ಗಣ್ಯರಿಂದ ಪ್ರಶಂಸೆಗೆ ಪಾತ್ರವಾಗಿದೆ.
50 ಆನ್‌ಲೈನ್ ಕಾರ್ಯಕ್ರಮಗಳ ವಿವರಗಳು:
ನನ್ನ ಲಾಕ್‌ಡೌನ್ ಲೈಪ್ ವಿಶೇಷ ಕಾರ್ಯಕ್ರಮ, ಉಡುಪಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಾಧಿಕಾರಿಗಳೊಂದಿಗೆ ಸಂವಾದ, ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್‌ರೊಂದಿಗೆ ಮಾತುಕತೆ, ಕ್ರಿಕೆಟ್ ಅಂಗಳ- ಕ್ರಿಕೆಟ್ ಬದುಕಿನ ಮಾತುಗಳು, ಕುಸಲ್ದ ಪಂಥ ಟೆನ್ಶನ್ ದೂರ ಮಲ್ಪುಗ, ಬದಲಾವಣೆ ಜಗದ ನಿಯಮ, ಮಹಿಳಾ ಶಕ್ತಿಯೇ ಸಮಾಜದ ಶಕ್ತಿ, ಇದು ಸೋತು ಗೆದ್ದವರ ಕತೆ, ವಿಶ್ವ ತಾಯಂದಿರ ದಿನಾಚರಣೆ, ಯುವಜನತೆ ಮತ್ತು ಯಶಸ್ಸು, ಲಾಕ್‌ಡೌನ್ ಸಮಯದ ಸದುಪಯೋಗ, ಸಂಘದ ಪದಾಧಿಕಾರಿಗಳೊಂದಿಗೆ ಸಂವಾದ, ಕಾರ್ಕಳ ತಾಲೂಕು ಮಟ್ಟದ ಆನ್ಲೈನ ಕವಿಗೋಷ್ಠಿ, ಸಂಘದ ಸದಸ್ಯರಿಗೆ ಒಟ್ಟು 6 ಸುತ್ತುಗಳ ಕ್ವಿಜ್ ಚಾಂಪಿಯನ್ ಸ್ಪರ್ಧೆ, ರಾಷ್ಟೀಯ ತರಬೇತಿ ದಿನಾಚರಣೆ, ಇಂದಿನ ದಿನಗಳಲ್ಲಿ ಸಂಘ ಸಂಸ್ಥೆಗಳ ಹೊಣೆಗಾರಿಕೆ, ನಮ್ಮ ತುಳುನಾಡ ಸಂಸ್ಕೃತಿ, ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮ, ವಿಶ್ವ ತಂಬಾಕು ನಿಷೇದ ದಿನ, ನಮ್ಮ ಸಂಘ- ನಮ್ಮ ಹೆಮ್ಮೆ ದೃಷ್ಟಿಕೋನ-2025 ಪೂರ್ವಾಧ್ಯಕ್ಷರುಗಳ ಸ್ನೇಹ ಸಮ್ಮಿಲನ, ವಿಶ್ವ ಪರಿಸರ ದಿನ, ಸಾಂಸ್ಕೃತಿಕ ಸಂಭ್ರಮ ಪ್ರತಿಭೆಗಳ ಅನಾವರಣ, ಯುವಜನತೆ ಮತ್ತು ಸಾಹಿತ್ಯ, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರೊಂದಿಗೆ ಸಂವಾದ, ತುಳುನಾಡ್ದ ಸಂಸ್ಕೃತಿ ಬೊಕ್ಕ ಆಚಾರ ವಿಚಾರ, ಆನ್ಲೈನ್ ಸಂಗೀತೋತ್ಸವ, ತುಳುನಾಡಿನ ನಂಬಿಕೆ ಆಚರಣೆ – ದೈವಾರಾಧನೆ ಸೊಬಗು, ವಿಶ್ವ ರಕ್ತದಾನಿಗಳ ದಿನ, ಸವಿಸವಿ ನೆನಪು, ಡ್ಯಾನ್ಸ್ ಧಮಾಕ, ಭಜನೋತ್ಸವ, ಅಂತರಾಷ್ಟ್ರೀಯ ಯೋಗ ದಿನ, ಸಂಘದ ಸದಸ್ಯರಿಗಾಗಿ ಕೌನ್ ಬನೇಗಾ ಚಾಂಪಿಯನ್ ಸ್ಪರ್ಧೆ, ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ, ಫ್ಯಾಮಿಲಿ ಸೆಲ್ಪಿ ಪೋಟೋ ಕಾಂಟೆಸ್ಟ್, ನವೋಲ್ಲಾಸ ವಿಶೇಷ ಕಾರ್ಯಕ್ರಮ, ಸ್ವಸ್ಥ ಸಮಾಜದಲ್ಲಿ ಮಹಿಳೆಯರ ಪಾತ್ರ, ಅಗ್ನಿ ಶಮನ ಮತ್ತು ಪ್ರಥಮ ಚಿಕಿತ್ಸೆ, ನಾನು ಅಧ್ಯಕ್ಷನಾದರೇ-ನನ್ನ ಯೋಚನೆ ಮತ್ತು ಯೋಜನೆಗಳು, ಸಾಹಿತ್ಯ ಚಿಂತನ ಮಂಥನ, ಚರ್ಚೆ ವಿಥ್ ಚಿಂಟು-ಇದು ಗೊಂಬೆಯಾಟವಯ್ಯ, ಕಾಮಿಡಿ ಟಾಕ್ ವಿಥ್ ಸುನಿಲ್ ನೆಲ್ಲಿಗುಡ್ಡೆ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ತರಬೇತಿ ಕಾರ್ಯಾಗಾರ, ಸಂಘದ ಸದಸ್ಯರೊಂದಿಗೆ ಜಸ್ಟ್ ಮಾತುಕಥೆ, ಜಿಲ್ಲಾ ಮಟ್ಟದ ಕೌನ್ ಬನೇಗಾ ಚಾಂಪಿಯನ್ ಟಿವಿ ರಿಯಾಲಿಟಿ ಶೋ ಶೈಲಿಯ ಕ್ವಿಜ್ ಸ್ಪರ್ಧೆ.
ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಅತಿಥಿಗಳು:
ಉಡುಪಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜಾ, ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸತೀಶ್ ಬಟ್ವಾಡಿ, ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪಾಲನಾ ಸಂಘದ ರಾಜ್ಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಗೀತಾಂಜಲಿ ಸುವರ್ಣ, ಜೇಸಿಐ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಕೆ., ಲಯನ್ಸ್ ಜಿಲ್ಲಾ ಗವರ್ನರ್ ಎನ್. ಎಂ. ಹೆಗ್ಢೆ, ಜೇಸಿಐ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ಹಿರಿಯ ಸಾಹಿತಿ ಡಾ. ಜನಾರ್ಧನ ಭಟ್, ಕಸಾಪ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಉಡುಪಿ ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕ್ಷೇತ್ರ ಶಿಕ್ಷಣಾಧಿಕಾರಿ ಜಿಸ್.ಎಸ್. ಶಶಿಧರ್, ಕಸಾಪ ಬೆಳ್ಮಣ್ಣು ಹೋಬಳಿ ಘಟಕದ ಅಧ್ಯಕ್ಷ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಬೆಳ್ಮಣ್ಣು ಜೇಸಿಐ ಅಧ್ಯಕ್ಷ ಕೃಷ್ಣ ಪವಾರ್. ಅಬ್ಬನಡ್ಕ ಲಿಯೋ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವ್ಯವಸ್ಥಾಪನ ಸಮತಿಯ ಸದಸ್ಯ ರಘುವೀರ್ ಶೆಣ್ಯೆ, ನಿಟ್ಟೆ ಕನ್ನಡ ಮಾಧ್ಯಮ ಹೈಸ್ಕೂಲ್ ಉಪನ್ಯಾಸಕ ಚಂದ್ರನಾಯ್ಕ್ ಟಿ., ಕಾರ್ಕಳ ವಿಜೇತ ವಿಶೇಷ ಶಾಲೆಯ ಸ್ಥಾಪಕರಾದ ಡಾ.ಕಾಂತಿ ಹರೀಶ್, ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಉಡುಪಿಯ ವೈದ್ಯ ಡಾ.ವಿಜಯ್ ನೆಗಳೂರು, ಉಡುಪಿ ಜಿಲ್ಲಾ ಉಪವಲಯ ಅರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ನಾಗೇಶ್ ಬಿಲ್ಲವ, ತುಳು ಚಲನಚಿತ್ರ ನಟ ಭೋಜರಾಜ್ ವಾಮಂಜೂರು, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ನವೀನ್ ಅಮೀನ್ ಶಂಕರಪುರ, ಜೇಸಿಐ ವಲಯ ಉಪಾಧ್ಯಕ್ಷ ಸತ್ಯನಾರಾಯಣ ಭಟ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಉದಯ ಕುಮಾರ್ ಹೆಗ್ದೆ, ತುಂಬೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿ. ಸುಬ್ರಹ್ಮಣ್ಯ ಭಟ್, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್, ನಂದಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಅಮೀನ್, ಭಾರತೀಯ ಜೇಸಿಐ ಫೌಂಡೇಶನ್ ನಿರ್ದೇಶಕ ಆಲನ್ ರೋಹನ್ ವಾಜ್, ದೈವ ನರ್ತಕ ಮತ್ತು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೋಳ ನಾರಾಯಣ ನಲ್ಕೆ, ಸಮಾಜ ಸೇವಕರು ಉದ್ಯಮಿ ಇನ್ನ ದೀಪಕ್ ಕೋಟ್ಯಾನ್, ತುಳು ಚಲನಚಿತ್ರ ನಟ ಪ್ರಸನ್ನ ಶೆಟಿ ಬೈಲೂರು, ಉಡುಪಿ ನಾರಾಯಣಗುರು ಅರ್ಬನ್ ಕೋ ಅಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಹರಿಶ್ವಂದ್ರ ಅಮೀನ್, ಜೇಸಿಐ ವಲಯ ನಿದೇರ್ಶಕ ಪಶುಪತಿ ಶರ್ಮ, ಜೇಸಿಐ ವಲಯ ನಿರ್ದೇಶಕ ಲೋಕೇಶ್ ರೈ ಕೆ., ಡಾ.ಸೌಜನ್ಯ ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆ ಸುಧಾಮಣಿ ಆರ್. ಯುಪಿಸಿಎಲ್ ಹಿರಿಯ ಸುರಕ್ಷತಾ ಅಧಿಕಾರಿ ಪ್ರಶಾಂತ್ ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ, ಗೌರವಸಲಹೆಗಾರ ರವಿರಾಜ್ ಶೆಟ್ಟಿ, ಭಾರತೀಯ ದೂರದರ್ಶನ ಹೆಚ್ಚುವರಿ ವಿಶ್ರಾಂತ ಮಹಾನಿರ್ದೇಶಕ ನಾಡೋಜಾ ಡಾ. ಮಹೇಶ್ ಜೋಶಿ, ಬಹುಮುಖ ಪ್ರತಿಭೆ ಸುಳ್ಯ ಪಿಲಿಕಜೆ ಸಾಯಿಶ್ರುತಿ, ಚಲನಚಿತ್ರ ನಟ ಸುನಿಲ್ ನೆಲ್ಲಿಗುಡ್ಡೆ, ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಎಲ್ಲಾ ಕಾರ್ಯಕ್ರಮಗಳು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಬೋಳ ಉದಯ ಅಂಚನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂಧರ್ಭದಲ್ಲಿ ಸಂಘದ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ಷ ವಿಠಲ ಮೂಲ್ಯ, ಪೂರ್ವಾಧ್ಯಕ್ಷರಾದ ರಘವೀರ್ ಶೆಟ್ಟಿ, ಆನಂದ ಪೂಜಾರಿ, ದಿನೇಶ್ ಪೂಜಾರಿ, ಸುರೇಶ್ ಪೂಜಾರಿ, ರಾಜೇಶ್ ಕೋಟ್ಯಾನ್, ಸತೀಶ್ ಪೂಜಾರಿ, ಉಪಾಧ್ಯಕ್ಷ ಪ್ರಶಾಂತ್ ಪೂಜಾರಿ, ಕಾರ್ಯದರ್ಶಿ ಅಬ್ಬನಡ್ಕ ಹರಿಪ್ರಸಾದ್ ಆಚಾರ್ಯ, ಕೋಶಾಧಿಕಾರಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪುಷ್ಪ ಕುಲಾಲ್, ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
“ಲಾಕ್ದೌನ್‌ನ ಈ ಸಂದರ್ಭದಲ್ಲಿ ಒಂದು ವಿಶಿಷ್ಠವಾದ ಆಲೋಚನೆ, ಕಲ್ಪನೆಯ ಕಾರ್ಯಕ್ರಮವನ್ನು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಮಾಡುತ್ತಿರುವುದು ಸಂತಸದ ಸಂಗತಿ. ಬಹುಶ: ಒಂದು ಯುವಕ ಸಂಘಟನೆ ವರ್ಚುವಲ್ ಕಾರ್ಯಕ್ರಮವನ್ನು ನಡೆಸುತ್ತಿರುವಂತದ್ದು ನಾನು ಕೇಳುವಂತೆ ಇದು ಮೊದಲ ಸಂಘಟನೆ ಎಂದು ಭಾವಿಸುತ್ತೇನೆ“ – ಶಾಸಕ ವಿ. ಸುನಿಲ್ ಕುಮಾರ್
“ಕರ್ನಾಟಕ ರಾಜ್ಯದಲ್ಲಿ ಎಷ್ಟೋ ಸಾವಿರ ಯುವಕ ಸಂಘಗಳಿವೆ ಆದರೆ ಈ ರೀತಿಯ ೫೦ ಮಾದರಿಯ ಆನ್‌ಲೈನ್ ಕಾರ್ಯಕ್ರಮ ನಡೆಸಿರುವ ಏಕೈಕ ಸಂಘಟನೆ ಎಂದು ನಾನು ಧೈರ್ಯದಿಂದ ಹೇಳಬಲ್ಲೆ“ – ಉಡುಪಿ ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ
“ಜಾತಿ, ಮತ, ಭಾಷೆ, ಧರ್ಮದ ಬೇಧಭಾವವಿಲ್ಲದೇ ನಾವೆಲ್ಲರೂ ಒಂದೇ ಎಂದು ನಾರಾಯಣ ಗುರುಗಳ ಹಾಗೂ ಸ್ವಾಮಿ ವಿವೇಕಾನಂದರ ತತ್ವ ಸಂದೇಶಕ್ಕೆ ಆದರ್ಶವಾಗಬಲ್ಲ ಸಂಸ್ಥೆ ಎಂದರೇ ಅದು ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್“ – ಶ್ರೀ ಕ್ಷೇತ್ರ ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ