Sunday, September 29, 2024
Sunday, September 29, 2024

ನಾಗರಿಕರ ಅರಿವಿಗೆ ಅಮೃತ ಮಹೋತ್ಸವ ಬಳಕೆಯಾಗಲಿ: ರವೀಂದ್ರನಾಥ ಶ್ಯಾನುಭಾಗ

ನಾಗರಿಕರ ಅರಿವಿಗೆ ಅಮೃತ ಮಹೋತ್ಸವ ಬಳಕೆಯಾಗಲಿ: ರವೀಂದ್ರನಾಥ ಶ್ಯಾನುಭಾಗ

Date:

ಉಡುಪಿ: ಸಂವಿಧಾನ, ಪ್ರಜಾಪ್ರಭುತ್ವ, ನಾಗರೀಕ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಸಾಧ್ಯವಾದಷ್ಟು ವ್ಯಾಜ್ಯಗಳನ್ನು ಕೋರ್ಟಿನಿಂದ ಹೊರಗೆ ಬಗೆಹರಿಸುವ ಬಗ್ಗೆ ಗಮನಹರಿಸಬೇಕಾಗಿದೆ. ಗಾಂಧೀಜಿಯವರು ಕಲಿಸಿದ ಶಾಂತಿಯುತ ಹೋರಾಟದ ಮಹತ್ವವನ್ನು ಮನವರಿಕೆ ಮಾಡಬೇಕಾಗಿದೆ. ಇದು ರಾಜಕೀಯೇತರ ಸಂಘಟನೆಗಳ ಮೂಲಕ ಅಮೃತ ಮಹೋತ್ಸವದ ನೆಪದಲ್ಲಿ ನಡೆಯಬೇಕಾಗಿದೆ ಎಂದು ಮಾನವ ಹಕ್ಕು ಸಂರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ರವೀಂದ್ರನಾಥ ಶ್ಯಾನುಭಾಗರು ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಹಾಗೂ ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ ಇವರ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದ ಅಮೃ ಮಹೋತ್ಸವದ ಪ್ರಯುಕ್ತ 75 ಅರಿವು ಕಾರ್ಯಕ್ರಮಗಳ ಅನುಷ್ಠಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಅವರು 75 ಕಾರ್ಯಕ್ರಮಗಳ ಅನುಷ್ಠಾನದ ವಿವರಗಳನ್ನು ನೀಡಿ ಪ್ರಸ್ತಾವಿಕವಾಗಿ ಮಾತನಾಡಿದರು. ವೈಕುಂಠ ಬಾಳಿಗ ಕಾಲೇಜಿನ ಪ್ರಾಂಶುಪಾಲೆ ಡಾ. ನಿರ್ಮಲ ಕುಮಾರಿ ಸ್ವಾಗತಿಸಿ, ಉಪನ್ಯಾಸಕ ಡಾ. ರಘುನಾಥ ವಂದಿಸಿದರು. ಡಾ. ದುಗ್ಗಪ್ಪ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕರಾವಳಿ ಸಾಹಿತಿಗಳು-ಕಲಾವಿದರು-ಲೇಖಕರು-ಕವಿಗಳು-ಚುಟುಕು ಬರಹಗಾರರ ಸಮ್ಮೇಳನ

ಕುಂಜಿಬೆಟ್ಟು, ಸೆ.29: ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವದಲ್ಲಿ...

ಕುಟುಂಬ ಸಂಸಾರದ ನಡುವೆಯೂ ಸಾಧನೆಯ ಬೆನ್ನು ಹತ್ತಿದ ಗ್ರಾಮೀಣ ಮಹಿಳೆ

ಶಿಕ್ಷಣ ಎಂಬುದು ವ್ಯಕ್ತಿತ್ವ ವಿಕಸನದ ಅತ್ಯಂತ ಮುಖ್ಯವಾದ ಘಟ್ಟವಾಗಿದೆ. ಮುಸ್ಲಿಂ ಹೆಣ್ಣು...

ಪಂಚವರ್ಣ: 226ನೇ ವಾರದ ಪರಿಸರ ಸ್ನೇಹಿ ಅಭಿಯಾನ

ಕೋಟ, ಸೆ.29: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ...

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಗೆ ಭಾರತ ತಿರುಗೇಟು

ಯು.ಬಿ.ಎನ್.ಡಿ., ಸೆ.29: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್...
error: Content is protected !!