Saturday, September 21, 2024
Saturday, September 21, 2024

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ 60ನೇ ವಾರ್ಷಿಕೋತ್ಸವದ ಆಚರಣೆ

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ 60ನೇ ವಾರ್ಷಿಕೋತ್ಸವದ ಆಚರಣೆ

Date:

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯು ಸಮುದಾಯಕ್ಕೆ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ 60 ವರ್ಷಗಳನ್ನು ಪೂರೈಸುತ್ತಿದೆ. ಇದರ ಪ್ರಯುಕ್ತವಾಗಿ ಇಡೀ ವರ್ಷವು ರೋಗಿಯ ಕೇಂದ್ರೀಕೃತತೆಯು ಪ್ರಮುಖ ಅಂಶವಾಗಿದೆ, ಸಾರ್ವಜನಿಕರು, ಕಾರ್ಪೊರೇಟ್‌ಗಳು, ವೈದ್ಯರು ಮತ್ತು ಸಮಾಜಮುಖಿ ಚಟುವಟಿಕೆಗಳೊಂದಿಗೆ ತೊಡಗಿಸಿಕೊಳ್ಳುವುದು ಈ ಆಚರಣೆಯ ಭಾಗವಾಗಿರುತ್ತದೆ. “1962 ರಿಂದ ಯಾವಾಗಲೂ ರೋಗಿ ಮೊದಲು” ಎಂಬ ಘೋಷವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರ ಅಂಗವಾಗಿ ಮಣಿಪಾಲದ ಹೋಟೆಲ್ ಫಾರ್ಚೂನ್ ಇನ್ ವ್ಯಾಲಿವ್ಯೂನಲ್ಲಿ ಉಡುಪಿ ಜಿಲ್ಲೆಯ ಹಿರಿಯ ನಿವೃತ್ತ ವೈದ್ಯರಿಗೆ ಡಾ. ಟಿಎಂಎ ಪೈ ಆರೋಗ್ಯ ಸೇವಕ ಪ್ರಶಸ್ತಿಗಳನ್ನು ಮತ್ತು ವೈದ್ಯರ ಪ್ರಿವಿಲೇಜ್ ಕಾರ್ಡ್‌ನ ಉದ್ಘಾಟನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮತ್ತು ಡಾ. ಹೆಚ್ ಎಸ್ ಬಲ್ಲಾಳ್ ಅವರು ಜಂಟಿಯಾಗಿ ಪ್ರಿವಿಲೇಜ್ ಕಾರ್ಡ್ ಅನ್ನು ಬಿಡುಗಡೆ ಮಾಡಿದರು. ಇದನ್ನು ಎಲ್ಲಾ ರೆಫರ್ ಮಾಡುವ ವೈದ್ಯರಿಗೆ ನೀಡಲಾಗುತ್ತದೆ. ಬಳಿಕ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರು, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಅವರು ಕರ್ನಾಟಕ ಹಾಗೂ ನೆರೆಯ ಪ್ರದೇಶಗಳಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸುವ ಪ್ರಯತ್ನವನ್ನು ಶ್ಲಾಘಿಸಿದರು.

ಸಾಂಕ್ರಾಮಿಕ ರೋಗದ ಸಮಯದಲ್ಲಿ ಆರೋಗ್ಯ ಕಾರ್ಯಕರ್ತರ ಕೆಲಸಕ್ಕಾಗಿ ಶ್ಘಾಘಿಸಿದರು. ಜಿಲ್ಲಾಡಳಿತದ ಎಲ್ಲಾ ಪ್ರಯತ್ನಗಳಲ್ಲಿ ಸದಾ ಬೆನ್ನೆಲುಬಾಗಿ ನಿಂತ ಮಾಹೆಯ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು. ನಂತರ ಉಡುಪಿ ಜಿಲ್ಲೆಯ ಐವರು ಹಿರಿಯ ಸಲಹೆಗಾರರಿಗೆ ಡಾ ಟಿಎಂಎ ಪೈ ಆರೋಗ್ಯ ಸೇವಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಕಳದಿಂದ ಡಾ. ಶೈಲಾ ಎಸ್.ನಾಯಕ್, ಹಾಗೂ ಡಾ. ಗಿರೀಶ್ ಶೆಣೈ, ಉಡುಪಿಯಿಂದ ಡಾ. ಕೃಷ್ಣದೇವ ಕಲ್ಕೂರ, ಮಂದಾರ್ತಿಯಿಂದ ಡಾ. ಎನ್.ಸುರೇಶ್ಚಂದ್ರ ಶೆಟ್ಟಿ, ಕುಂದಾಪುರದಿಂದ ಡಾ. ಅಂಪಾರ ವಸಂತಕುಮಾರ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂಡಿ ವೆಂಕಟೇಶ್, ನಮ್ಮ ಸಂಸ್ಥಾಪಕ ದಿವಂಗತ ಡಾ. ಟಿಎಂಎ ಪೈ ಅವರ ಆಶಯಗಳನ್ನು ಸಾಧಿಸುವಲ್ಲಿ 60 ವರ್ಷಗಳ ಕಾಲ ಸಮಾಜಕ್ಕೆ ಸಲ್ಲಿಸಿದ ಅತ್ಯುತ್ತಮ ಸೇವೆ ಅದ್ಭುತ ಮತ್ತು ಅಸಾಧಾರಣವಾಗಿದೆ ಎಂದು ಹೇಳಿದರು.

ಈ ಪ್ರಯಾಣದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ತಿಳಿಸಿದರು. ನಮ್ಮ ಆಸ್ಪತ್ರೆಯನ್ನು ಬೆಂಬಲಿಸುವ ವೈದ್ಯರ ಸೇವೆಗಾಗಿ ಕೃತಜ್ಞತಾಭಾವವಾಗಿ ಕಸ್ತೂರ್ಬಾ ಆಸ್ಪತ್ರೆಯು ಒಂದು ಸಣ್ಣ ಉಡುಗೊರೆಯಾಗಿ ಪ್ರಿವಿಲೇಜ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಈ ಪ್ರಿವಿಲೇಜ್ ಕಾರ್ಡ್‌ನೊಂದಿಗೆ ನಮ್ಮ ಆಸ್ಪತ್ರೆಗೆ ಭೇಟಿ ನೀಡಿದಾಗ ಕಾರ್ಡ್‌ದಾರರು ಮತ್ತು ಅವರ ಕುಟುಂಬವು ರಿಯಾಯಿತಿಯನ್ನು ಪಡೆಯುತ್ತದೆ ಎಂದು ತಿಳಿಸಿದರು.

ಮಾಹೆ ಸಹ-ಉಪ ಕುಲಪತಿ (ವೈದ್ಯಕೀಯ ಮತ್ತು ದಂತ ವಿಜ್ಞಾನ) ಡಾ. ಪಿಎಲ್‌ಎನ್‌ಜಿ ರಾವ್, ಆಸ್ಪತ್ರೆಯ 60ನೇ ವಾರ್ಷಿಕೋತ್ಸವದ ಅಂಗವಾಗಿ ಡಾ. ಟಿಎಂಎ ಪೈ ಆರೋಗ್ಯ ಸೇವಕ ಪ್ರಶಸ್ತಿಯನ್ನು ಮೊದಲ ಬಾರಿಗೆ ಆಯೋಜಿಸಿದೆ ಮತ್ತು ಸ್ವೀಕರಿಸಿದವರನ್ನು ಅಭಿನಂದಿಸಿದರು.

ಗ್ರಾಮೀಣ ಭಾಗದಲ್ಲಿ ಶಿಬಿರಗಳನ್ನು ರಚಿಸಿ ತೃತೀಯ ಹಂತದ ಚಿಕಿತ್ಸೆ ನೀಡುವ ಮೂಲಕ ಆರೋಗ್ಯ ಸೇವೆಯನ್ನು ಜನಸಾಮಾನ್ಯರಿಗೆ ತಲುಪಿಸುವುದು ಮಣಿಪಾಲ ಸಂಸ್ಥೆಯ ಉದ್ದೇಶವಾಗಿದೆ ಎಂದರು. ರೋಗಿಗಳು ಕುಟುಂಬ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಾರೆ ಮತ್ತು ಅಗತ್ಯವಿದ್ದಲ್ಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸುತ್ತಾರೆ, ಅಂದರೆ ತೃತೀಯ ಆರೈಕೆಯ ಆಸ್ಪತ್ರೆ ಮತ್ತು ಅಗತ್ಯವಿರುವ ಜನರ ನಡುವೆ ಪ್ರಮುಖ ಕೊಂಡಿಯಾಗಿ ಸೇವೆ ಸಲ್ಲಿಸುತ್ತಿರುವ ಕುಟುಂಬ ವೈದ್ಯರ ಶ್ರಮವನ್ನು ಶ್ಲಾಘಿಸಿದರು.

ಮಾಹೆಯ ಸಹ ಕುಲಪತಿ ಡಾ. ಹೆಚ್ ಎಸ್ ಬಲ್ಲಾಳ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಸಂಸ್ಥಾಪಕ ದಿವಂಗತ ಡಾ.ಟಿ.ಎಂ.ಎ.ಪೈ ಅವರು ದಾರ್ಶನಿಕ ವ್ಯಕ್ತಿಯಾಗಿದ್ದರು ಮತ್ತು 1962ರಲ್ಲಿ ಕಸ್ತೂರಬಾ ಆಸ್ಪತ್ರೆ ಮಣಿಪಾಲವನ್ನು ಸ್ಥಾಪಿಸಿದರು ಎಂದು ಹೇಳಿದರು. ಇದು ತೃತೀಯ ಆರೈಕೆ ಆಸ್ಪತ್ರೆಯಾಗಿದ್ದು ಅದು ಕರ್ನಾಟಕದ ಹಾಗು ನೆರೆಯ ರಾಜ್ಯಗಳ ಜನರ ಆರೋಗ್ಯ ಅಗತ್ಯತೆಗಳನ್ನು ಪೂರೈಸುತ್ತದೆ ಎಂದರು. ಮತ್ತು ಹಲವು ದಶಕಗಳಿಂದ ಉತ್ತಮ ಗುಣಮಟ್ಟದ ಆರೈಕೆಯನ್ನು ನೀಡುತ್ತಿರುವುದಕ್ಕಾಗಿ ವೈದ್ಯಕೀಯ ಸಿಬ್ಬಂದಿಯನ್ನು ಹೊಗಳಿದರು.

ಪ್ರಾದೇಶಿಕ ಕಾರ್ಯನಿರ್ವಹಣಾಧಿಕಾರಿ ಸಿ.ಜಿ.ಮುತ್ತನ ಪ್ರಿವಿಲೇಜ್ ಕಾರ್ಡ್‌ನ ಅವಲೋಕನವನ್ನು ನೀಡಿದರು. ಕೆಎಂಸಿ ಡೀನ್ ಡಾ. ಶರತ್ ಕುಮಾರ್ ಸ್ವಾಗತಿಸಿ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ವಂದಿಸಿದರು. ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಮನರಂಜನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಿ.ಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ: ಡಿಜಿಟಲ್ ಗ್ರಂಥಾಲಯ, ಹ್ಯಾಪಿ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ; ದಾನಿಗಳಿಗೆ ಸನ್ಮಾನ

ಉಡುಪಿ, ಸೆ.20: ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಮಂಜೂರಾದ ಡಿಜಿಟಲ್ ಗ್ರಂಥಾಲಯ ಹಾಗೂ ಪಿ.ಎಂ.ಶ್ರೀ....

ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು: ಪವನ್ ಕಲ್ಯಾಣ್

ತಿರುಪತಿ, ಸೆ.20: ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ತುಂತುರು ನೀರಾವರಿ ಘಟಕ: ಅರ್ಜಿ ಆಹ್ವಾನ

ಉಡುಪಿ, ಸೆ.20: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ...

ಕಾಲರಾ ರೋಗ ಹರಡದಂತೆ ಎಚ್ಚರ ವಹಿಸಿ

ಉಡುಪಿ, ಸೆ.20: ಜಿಲ್ಲೆಯಲ್ಲಿ ಕಾಲರಾ ಪ್ರಕರಣ ಕಂಡುಬಂದಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು...
error: Content is protected !!