ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ 14 ಕುಟುಂಬಗಳಿಗೆ ಒಟ್ಟು ರೂ. 6,44,445/- ಮೊತ್ತದ ಪರಿಹಾರ ಚೆಕ್ ವಿತರಣೆ ತಾಲೂಕು ಕಚೇರಿಯ ಕೋರ್ಟ್ ಹಾಲ್ ನಲ್ಲಿ ಬುಧವಾರ ನಡೆಯಿತು. ಶಾಸಕ ಕೆ. ರಘುಪತಿ ಭಟ್ ಚೆಕ್ ವಿತರಿಸಿದರು. 76 ಬಡಗಬೆಟ್ಟು ಗ್ರಾಮದ ಮನೋರಂಜಿನಿ ಜತ್ತನ್ ಅವರಿಗೆ 71,625/-, ಮೂಡನಿಡಂಬೂರು ಗ್ರಾಮದ ಬಿ. ದೇವಿ ಅವರಿಗೆ 61,250/-, ಕಿದಿಯೂರು ಗ್ರಾಮದ ಲಲಿತ ರವರಿಗೆ 20, 055/-, ಕಮಲ ಶ್ರೀಯಾನ್ ರವರಿಗೆ 31,515/-, ಕೊಡವೂರು ಗ್ರಾಮದ ರತ್ನ ಆಚಾರ್ತಿ ಅವರಿಗೆ 60,000/-, ಶಾರದಾ ರವರಿಗೆ 40,000/-, ಗೌರಿ ಅವರಿಗೆ 20,000/-, ಗಿರಿಜಾ ಗಾಣಿಗ ಅವರಿಗೆ 45,000/-, ಬೇಬಿ ಅವರಿಗೆ 60,000/-, ಪದ್ಮಾವತಿ ಅವರಿಗೆ 75,000/-, ಲಕ್ಷ್ಮಿ ಅವರಿಗೆ 40,000/-, ಮಾಧವ ಬಂಗೇರ ಅವರಿಗೆ 40,000/-, ಅಶೋಕ್ ಕರ್ಕೇರ ಅವರಿಗೆ 40,000/-, ಲಲಿತಾ ಜತ್ತನ್ ಅವರಿಗೆ 40,000/- ರೂ ಗಳ ಚೆಕ್ ಸೇರಿದಂತೆ ಒಟ್ಟು 6,44,445 ರೂ ಮೊತ್ತದ ಚೆಕ್ಕನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ತಹಶೀಲ್ದಾರ ಪ್ರದೀಪ್ ಕುರ್ಡೆಕರ್, ಆರಾಧನಾ ಸಮಿತಿ ಸದಸ್ಯರಾದ ಜಗದೀಶ್ ಆಚಾರ್ಯ, ಜೀವನ್, ಚಂದ್ರಶೇಖರ್ ನಾಯ್ಕ, ಸುನೀತಾ ಪೈ, ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್, ಕಂದಾಯ ನಿರೀಕ್ಷಕರಾದ ಉಪೇಂದ್ರ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ದೇವಿಪ್ರಸಾದ್, ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕ್ ಉಪಸ್ಥಿತರಿದ್ದರು.