Saturday, November 23, 2024
Saturday, November 23, 2024

ಟ್ಯಾಕ್ಸಿಗಳ ಪ್ರಯಾಣ ದರ ಪರಿಷ್ಕರಣೆ

ಟ್ಯಾಕ್ಸಿಗಳ ಪ್ರಯಾಣ ದರ ಪರಿಷ್ಕರಣೆ

Date:

ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಮೇ 20ರಿಂದ ಜಾರಿಗೆ ಬರುವಂತೆ ಜಿಲ್ಲೆಯಲ್ಲಿ ಅಗ್ರಿಗೇಟರ್ಸ್ ನಿಯಮದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಪ್ರಯಾಣ ದರ ಪರಿಷ್ಕರಣೆಯನ್ನು ಸಾರ್ವಜನಿಕರ ಪ್ರಯಾಣಿಕರ ಹಿತದೃಷ್ಟಿಯಿಂದ ಮತ್ತು ಸ್ಥಳೀಯ ಜನಸಂಖ್ಯೆಗನುಗುಣವಾಗಿ ಮತು ಟ್ಯಾಕ್ಸಿ ಮಾಲಕ/ ಚಾಲಕರ ಜೀವನ ನಿರ್ವಹಣಾ ವೆಚ್ಚ, ಇಂಧನ ಬೆಲೆಗಳ ಹೆಚ್ಚಳ ಹಾಗೂ ವಾಹನಗಳ ಬೆಲೆ ಮತ್ತು ನಿರ್ವಹಣಾ ವೆಚ್ಚವು ಹೆಚ್ಚಾಗಿರುವುದನ್ನು ಗಮನದಲ್ಲಿರಿಸಿಕೊಂಡು ಈ ಕೆಳಗಿನಂತೆ ದರ ನಿಗದಿಪಡಿಸಿ, ಆದೇಶ ಹೊರಡಿಸಿ, ನಿರ್ಣಯ ಕೈಗೊಳ್ಳಲಾಗಿರುತ್ತದೆ.

5 ಲಕ್ಷದವರೆಗಿನ ಮೌಲ್ಯದ ಡಿ ವರ್ಗದ ಟ್ಯಾಕ್ಸಿಗಳಿಗೆ ನಿಗದಿತ ದರ ಕನಿಷ್ಟ 4 ಕಿ.ಮೀ. ವರೆಗೆ 75 ರೂ, ಹೆಚ್ಚುವರಿ ಪ್ರತಿ ಕಿ.ಮೀ ಗೆ 25 ರೂ ಆಗಿರುತ್ತದೆ. 5 ರಿಂದ 10 ಲಕ್ಷದ ವರೆಗಿನ ಮೌಲ್ಯದ ಸಿ ವರ್ಗದ ಟ್ಯಾಕ್ಸಿಗಳಿಗೆ ನಿಗದಿತ ದರ ಕನಿಷ್ಟ 4 ಕಿ.ಮೀ. ವರೆಗೆ 100 ರೂ. ಆಗಿದ್ದು, ಹೆಚ್ಚುವರಿ ಪ್ರತಿ ಕಿ.ಮೀ ಗೆ 28 ರೂ ಆಗಿರುತ್ತದೆ. 10 ಲಕ್ಷದಿಂದ 16 ಲಕ್ಷದ ವರೆಗಿನ ಮೌಲ್ಯದ ಬಿ ವರ್ಗದ ಟ್ಯಾಕ್ಸಿಗಳಿಗೆ ನಿಗದಿತ ದರ ಕನಿಷ್ಟ 4 ಕಿ.ಮೀ. ವರೆಗೆ 120 ರೂ. ಆಗಿದ್ದು, ಹೆಚ್ಚುವರಿ ಪ್ರತಿ ಕಿ.ಮೀ ಗೆ 31 ರೂ ಆಗಿರುತ್ತದೆ. 16 ಲಕ್ಷ ಮೇಲ್ಪಟ್ಟ ಮೌಲ್ಯದ ಎ ವರ್ಗದ ಟ್ಯಾಕ್ಸಿಗಳಿಗೆ ನಿಗದಿತ ದರ ಕನಿಷ್ಟ 4 ಕಿ.ಮೀ. ವರೆಗೆ 150 ರೂ. ಆಗಿದ್ದು, ಹೆಚ್ಚುವರಿ ಪ್ರತಿ ಕಿ.ಮೀ ಗೆ 35 ರೂ ಆಗಿರುತ್ತದೆ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರಧಾನಮಂತ್ರಿ ಫಸಲ್ ಬಿಮಾ ಹಿಂಗಾರು ಮತ್ತು ಬೇಸಿಗೆ ಹಂಗಾಮು ಯೋಜನೆ

ಉಡುಪಿ, ನ.22: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಭತ್ತವನ್ನು ಗ್ರಾಮ...

ಜಿಲ್ಲೆಯಲ್ಲಿ ಕೆ.ಎಫ್.ಡಿ ಪ್ರಕರಣಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ

ಉಡುಪಿ, ನ.22: ಕ್ಯಾಸನೂರು ಅರಣ್ಯ ರೋಗವು ಅಥವಾ ಮಂಗನ ಜ್ವರ ಕಾಯಿಲೆಯು...

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...
error: Content is protected !!