ಉದ್ಯಾವರ ಶ್ರೀ ವೀರ ವಿಠಲ ದೇವಸ್ಥಾನ, ಶ್ರೀ ಶುಭೋದಯ ಟ್ರಸ್ಟ್, ವೀರ ವಿಠಲ ತರುಣ ವೃಂದ ಮತ್ತು ವೀರ ವಿಠಲ ಮಹಿಳಾ ಮಂಡಳಿ ಜಂಟಿ ಆಶ್ರಯದಲ್ಲಿ ಉಚಿತ ಲಸಿಕಾ ಶಿಬಿರವು ಕೆ.ಎಂ.ಸಿ ಮಣಿಪಾಲ ಇದರ ಸಹಕಾರದಿಂದ ನಡೆಯಿತು. 110 ಜನರು ಶಿಬಿರದಲ್ಲಿ ಭಾಗವಹಿಸಿದರು.
ಆಡಳಿತ ಮೊಕ್ತೇಸರ ನಾಗೇಶ್ ಕಾಮತ್, ಶುಭೋದಯ ಟ್ರಸ್ಟ್ ಅಧ್ಯಕ್ಷ ರಂಗನಾಥ್ ಶೆಣೈ, ತರುಣ ವೃಂದ ಅಧ್ಯಕ್ಷ ರಾಜೇಶ್ ಕಾಮತ್, ಕಾರ್ಯದರ್ಶಿ ಆಶ್ಲೇಷ್ ಪೈ, ಕೋಶಾಧಿಕಾರಿ ವಿಕ್ರಮ್ ಆಚಾರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ಲತಾ ಜಿ. ಆಚಾರ್ಯ, ಜಯಲಕ್ಷ್ಮೀ ಕ್ಲಾತ್ ಸ್ಟೋರ್ ಇದರ ಪ್ರಥಮೇಶ್ ವೀರೇಂದ್ರ ಹೆಗ್ಡೆ, ಕೆ.ಎಂ.ಸಿ ಮಣಿಪಾಲ ಇದರ ಚೇತನ್, ಸ್ವಯಂಸೇವಕರಾದ ಅನಂತ ಆಚಾರ್ಯ ಯು., ವಿಕ್ರಮ್ ಶೆಣೈ, ಕಾರ್ತಿಕ್ ಆಚಾರ್ಯ, ಶಶಾಂಕ್ ಶೆಣೈ, ಅಭಯ್ ನಾಯಕ್, ದೀಪಕ್ ಕಾಮತ್, ಕೃಷ್ಣ ಆಚಾರ್ಯ, ಸಿದ್ಧಾರ್ಥ್ ಭಂಡಾರ್ಕರ್, ಅರ್ಜುನ್ ಆಚಾರ್ಯ, ಧೀರಜ್ ಕಾಮತ್, ಗೌರವ್ ಹೆಗ್ಡೆ, ಆಶೀಶ್ ಶೆಣೈ ಉಪಸ್ಥಿತರಿದ್ದರು.