Sunday, November 24, 2024
Sunday, November 24, 2024

ಶ್ರೀ ಕೃಷ್ಣ ಮಠದಲ್ಲಿ ಗೂಡುದೀಪ ಸ್ಪರ್ಧೆ

ಶ್ರೀ ಕೃಷ್ಣ ಮಠದಲ್ಲಿ ಗೂಡುದೀಪ ಸ್ಪರ್ಧೆ

Date:

ಉಡುಪಿ, ಅ.21: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ದೀಪಾವಳಿಯ ಪ್ರಯುಕ್ತ ಸಾರ್ವಜನಿಕರಿಗಾಗಿ ಗೂಡುದೀಪ ಸ್ಪರ್ಧೆಯನ್ನು ಅಕ್ಟೋಬರ್ 27ರಂದು ಶ್ರೀಕೃಷ್ಣ ಮಠದಲ್ಲಿ ಮಧ್ಯಾಹ್ನ 2 ರಿಂದ 5 ರವರೆಗೆ ಏರ್ಪಡಿಸಲಾಗಿದೆ. ಸ್ಪರ್ಧೆಯ ನಿಯಮಾವಳಿಗಳು ಹೀಗಿವೆ: ಗೂಡದೀಪ ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದೆ. ಸಾಂಪ್ರದಾಯಿಕ ವಿಭಾಗ ಮತ್ತು ಆಧುನಿಕ ವಿಭಾಗ. ಸಾಂಪ್ರದಾಯಿಕ ವಿಭಾಗ ಗೂಡುದೀಪ ಸ್ಪರ್ಧೆಯಲ್ಲಿ ಗೂಡುದೀಪ ಮಾದರಿ ಅಷ್ಟಪಟ್ಟಿ, ರಥ, ಮಂಟಪ ಅಥವಾ ಕಳಶ ಈ ವಿನ್ಯಾಸದಲ್ಲಿ ಇರಬೇಕು. ಪೂರ್ವತಯಾರಿ ಮಾಡಿ ತರಬಹುದು. ಜೋಡಿಸುವ ಕಾರ್ಯ ಮತ್ತು ಅಲಂಕಾರ ಸ್ಪರ್ಧೆಯ ಸ್ಥಳದಲ್ಲೇ ಮಾಡಬೇಕು. ಆಧುನಿಕ ವಿನ್ಯಾಸ ಗೂಡು ದೀಪವನ್ನು ಮನೆಯಲ್ಲಿಯೇ ತಯಾರಿ ಮಾಡಿಕೊಂಡು ಪ್ರದರ್ಶನ ಮಾಡಬಹುದು. ಗೂಡುದೀಪ ಗಾತ್ರಕ್ಕೆ ಮಿತಿ ಇಲ್ಲ. ಒಂದುಗೂಡು ದೀಪದಲ್ಲಿ ಗರಿಷ್ಠ ಎರಡು ಜನ ಸ್ಪರ್ಧಾಳುಗಳಾಗಿ ಭಾಗವಹಿಸಬಹುದು. ವಯಸ್ಸಿನ ನಿರ್ಬಂಧ ವಿಲ್ಲ. ಭಾಗವಹಿಸಿದ ಎಲ್ಲಾ ಸ್ಪರ್ದಾಳುಗಳಿಗೂ ಪ್ರೋತ್ಸಾಹಧನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಗೂಡುದೀಪ ಗಳನ್ನು ಕನಿಷ್ಠ 15 ದಿನಗಳ ಕಾಲ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪ್ರದರ್ಶಿಸಲಾಗುವುದು. ಆನಂತರ ಗೂಡುದೀಪವನ್ನು ಸ್ಪರ್ಧಾಳುಗಳಿಗೆ ಹಿಂತಿರುಗಿಸಲಾಗುವುದು. ಸಾಂಪ್ರದಾಯಿಕ ವಿಭಾಗದಲ್ಲಿ ಪ್ರಥಮ ಬಹುಮಾನ ರೂ. 8000 ದ್ವಿತೀಯ ಬಹುಮಾನ ರೂ. 5000, ತೃತೀಯ ಬಹುಮಾನ ರೂ.3000 ಹಾಗೂ ಸಮಾಧಾನಕರ ಒಂದು ಸಾವಿರ ರೂಪಾಯಿಗಳ ಎರಡು ಬಹುಮಾನಗಳನ್ನು ನೀಡಲಾಗುವುದು. ಆಧುನಿಕ ವಿನ್ಯಾಸದ ಗೂಡುದೀಪ ಬಹುಮಾನ ಹೀಗಿವೆ- ಪ್ರಥಮ ಬಹುಮಾನ 5000 ದ್ವಿತೀಯ ಬಹುಮಾನ 3000 ಹಾಗೂ ತೃತೀಯ ಬಹುಮಾನ 2000. ಸಮಾಧಾನಕರ ಬಹುಮಾನ ಒಂದು ಸಾವಿರ ರೂಪಾಯಿಯ ಎರಡು ಬಹುಮಾನಗಳು.

ಸ್ಪರ್ಧೆಯ ನಿರ್ಣಾಯಕರ ತೀರ್ಮಾನವೇ ಅಂತಿಮ. ಗೂಡುದೀಪ ಸ್ಪರ್ಧೆಯ ಹೆಚ್ಚಿನ ಮಾಹಿತಿಗಾಗಿ ಬೆಳಿಗ್ಗೆ 9ರಿಂದ ಸಂಜೆ 6 ರವರೆಗೆ ಈಶ್ವರ ಚಿಟ್ಪಾಡಿ 9916009660 ಕೇಶವ ಆಚಾರ್ಯ ದೊಡ್ಣಗುಡ್ಡೆ, 9632287917 ದಯಾನಂದ ಕೋಟ್ಯಾನ್ ಕೊರಂಗ್ರ ಪಾಡಿ 9880745349 ಹಾಗೂ ಸುಮಿತ್ರ ಕೆರೇಮಠ 9035679905 ಇವರನ್ನು ಸಂಪರ್ಕಿಸಬಹುದು. ಸಾಂಸ್ಕೃತಿಕ ಪರಂಪರೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಸಾಂಸ್ಕೃತಿಕ ಸ್ಪರ್ಧೆಯನ್ನು ಸಾರ್ವಜನಿಕರಿಗೆ ಮುಕ್ತವಾಗಿ ಆಯೋಜಿಸಿದೆ. ದೀಪಾವಳಿಯ ಆಚರಣೆಗೆ ಸೇರಲು ನಾವು ಎಲ್ಲಾ ಉತ್ಸಾಹಿ ಭಾಗವಹಿಸುವವರನ್ನು ಆಹ್ವಾನಿಸುತ್ತೇವೆ ಎಂದು ಶ್ರೀಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಮಹಾರಾಷ್ಟ್ರದ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಗೆಲುವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಉತ್ತಮ...
error: Content is protected !!