Saturday, September 21, 2024
Saturday, September 21, 2024

ಯೋಗ ದಿನ: ಅಂಚೆ ಚೀಟಿ ಬಿಡುಗಡೆ

ಯೋಗ ದಿನ: ಅಂಚೆ ಚೀಟಿ ಬಿಡುಗಡೆ

Date:

ಭಾರತೀಯ ಅಂಚೆ ಇಲಾಖೆಯು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆದ್ಯತೆ ನೀಡುತ್ತಾ ಬಂದಿದ್ದು, ಈ ದಿನವನ್ನು ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ದೇಶದ ಸುಮಾರು 810 ಪ್ರಧಾನ ಅಂಚೆ ಕಚೇರಿಗಳಲ್ಲಿ ಯೋಗ ದಿನದ ಲಾಂಛನವಿರುವ ಸ್ಪೆಷಲ್ ಸ್ಟಾಂಪ್ ಕ್ಯಾನ್ಸಲೇಷನ್ (ವಿಶೇಷ ಅಂಚೆ ರದ್ಧತಿ ಮೊಹರು)ನ ವಿಶೇಷ ಅಂಚೆ ಚೀಟಿಗಳನ್ನು ಇಲಾಖೆಯು ಬಿಡುಗಡೆಗೊಳಿಸಿದೆ.

ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21 ರಂದು ಜಿಲ್ಲೆಯ ಉಡುಪಿ, ಮಣಿಪಾಲ ಹಾಗೂ ಕುಂದಾಪುರ ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂಚೆ ಪತ್ರ ಹಾಗೂ ಅಂಚೆ ಪರಿಕರಗಳಿಗೆ ಅಂಚೆ ಮೊಹರನ್ನು ಮುದ್ರಿಸಲಾಯಿತು. ಕುಂದಾಪುರ ಅಂಚೆ ಕಚೇರಿಯಲ್ಲಿ ಯೋಗ ಮತ್ತು ಯೋಗದಿಂದಾಗುವ ಪ್ರಯೋಜನಗಳ ಕುರಿತು, ಯೋಗ ಪರಿಣಿತ, ಹಿರಿಯ ಅಂಚೆ ಕಚೇರಿ ಉದ್ಯೋಗಿ ಎಚ್.ಕೆ ಭಾಸ್ಕರ ಶೆಟ್ಟಿ ಮಾಹಿತಿ ನೀಡಿದರು. ಈ ಮೂರು ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಸಾರ್ವಜನಿಕರ ವೀಕ್ಷಣೆಗೆ ಯೋಗ ಮಾಹಿತಿ ಬಿತ್ತರಿಸುವ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲಾಯಿತು.

ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ನೇತೃತ್ವದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ ಹಾಗೂ ಕೃಷ್ಣರಾಜ ವಿಠಲ ಭಟ್ ರವರು ಮಾಹೆ ವಿಶ್ವ ವಿದ್ಯಾಲಯ ಮಣಿಪಾಲದ ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ಆಚಾರ್ಯ ಹಾಗೂ ನಗರದ ಹಿರಿಯ ಫಿಲಾಟಲಿಸ್ಟ್ ಕೃಷ್ಣಯ್ಯನರವರ ನಿವಾಸಕ್ಕೆ ತೆರಳಿ ಯೋಗ ದಿನದ ಸ್ಪೆಷಲ್ ಕ್ಯಾನ್ಸಲೇಷನ್ ಮಾಡಿದ ಕವರ್ ಮತ್ತು ಪೋಸ್ಟ್ ಕಾರ್ಡ್ ಗಳನ್ನು ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗಿಡ ನೆಡುವ ಕಾರ್ಯಕ್ರಮ

ಉಡುಪಿ, ಸೆ.21: ಸ್ವಚತಾ ಹೀ ಅಂದೋಲನ ಪಾಕ್ಷಿಕ-2024 ಆಚರಣೆಯ ಅಂಗವಾಗಿ ನಮ್ಮ...

ವಿಶ್ವ ಶಾಂತಿಗಾಗಿ ಮಾನವೀಯತೆಯ ನಡಿಗೆ ಜಾಥಾ

ಉಡುಪಿ, ಸೆ.21: ಭಾರತೀಯ ರೆಡ್‌ಕ್ರಾಸ್ ರಾಜ್ಯ ಶಾಖೆ ಮತ್ತು ಉಡುಪಿ ಜಿಲ್ಲಾ...

ಲೋಕಾಯುಕ್ತ ಜನಸಂಪರ್ಕ ಸಭೆ

ಉಡುಪಿ, ಸೆ.21: ಉಡುಪಿ ಲೋಕಾಯುಕ್ತ ವಿಭಾಗದ ವತಿಯಿಂದ ಜಿಲ್ಲಾ ಲೋಕಾಯುಕ್ತ ವಿಭಾಗದ...

ಕೃಷಿ ಯಾಂತ್ರೀಕರಣ ಯೋಜನೆ: ಅರ್ಜಿ ಆಹ್ವಾನ

ಉಡುಪಿ, ಸೆ.21: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ...
error: Content is protected !!