ದಿನಾಂಕ 25-06-2021 ರ ಒಳಗೆ ಉದ್ಯೋಗ ನಿಮಿತ್ತ, ವ್ಯಾಸಂಗಕ್ಕೆ ಹಾಗೂ ಒಲಿಂಪಿಕ್ ಕ್ರೀಡೆಯಲ್ಲಿ ಭಾಗವಹಿಸಲು ಹೊರದೇಶಕ್ಕೆ ತೆರಳುವವರಲ್ಲಿ ಈಗಾಗಲೇ ಪ್ರಥಮ ಡೋಸ್ ಕೋವಿಶೀಲ್ಡ್ ಪಡೆದು 28 ದಿನಗಳಾಗಿದ್ದಲ್ಲಿ ತಮ್ಮ 1) ಪ್ರಯಾಣದ ಟಿಕೆಟ್, 2) ಆಧಾರ್ ಕಾರ್ಡು, 3) ಪಾಸ್ ಪೋರ್ಟ್, 4) ಉದ್ಯೋಗಿ ಆಗಿರುವ ಬಗ್ಗೆ ಉದ್ಯೋಗದಾತ ಕಂಪೆನಿಯ ಆಫರ್ ಲೆಟರ್, 5) ವೀಸಾ, 6) ವ್ಯಾಸಂಗದ ಬಗ್ಗೆ ವಿದ್ಯಾಸಂಸ್ಥೆಯ ಪತ್ರ (ಆಫರ್ ಲೆಟರ್) ಹಾಗೂ 7) ಪ್ರಥಮ ಡೋಸ್ ಕೋವೀಶೀಲ್ಡ್ ಪಡೆದ ಬಗ್ಗೆ ದಾಖಲೆಗಳೊಂದಿಗೆ ಎಲ್ಲಾ ವಯೋಮಾನದವರು ದಿನಾಂಕ ಜೂನ್ 15 ರಂದು ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್. ಶೆಟ್ಟಿ) ಆಸ್ಪತ್ರೆ ಉಡುಪಿ ಇಲ್ಲಿ ಹಾಜರಾಗಿ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆಯುವಂತೆ ತಿಳಿಸಿದೆ. ಈ ಕೇಂದ್ರದಲ್ಲಿ 100 ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಮೇಲಿನಂತೆ ಹೊರದೇಶಕ್ಕೆ ಹೊರಡುವ ಅರ್ಹರಿಗೆ ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ವಿದೇಶಕ್ಕೆ ಹೋಗುವವರಿಗೆ ಕೋವಿಶೀಲ್ಡ್ ಲಸಿಕೆ
ಉಡುಪಿ: ವಿದೇಶಕ್ಕೆ ಹೋಗುವವರಿಗೆ ಕೋವಿಶೀಲ್ಡ್ ಲಸಿಕೆ
Date: