ಮುಂಬಯಿ: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಮೂರನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 5 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಸೋಲಿನ ಭೀತಿಯಲ್ಲಿದೆ.
ಇದಕ್ಕೂ ಮೊದಲು ದಿನದಾಟ ಆರಂಭಿಸಿದ ಭಾರತ, ಆರಂಭಿಕ ಜೋಡಿ ಮಾಯಂಕ್-ಪೂಜಾರ ವೇಗವಾಗಿ ರನ್ ಗಳಿಸಲು ಆರಂಭಿಸಿದರು.
ಮಾಯಂಕ್ ಅಗರ್ವಾಲ್ 62 ರನ್ ಗಳಿಸಿದರೆ, ಪೂಜಾರ 47 ರನ್ ಗಳಿಸಿ, ಇಬ್ಬರೂ ಅಜಾಜ್ ಪಟೇಲ್ ದಾಳಿಗೆ ವಿಕೆಟ್ ಒಪ್ಪಿಸಿದರು.
ಶುಭ್ಮನ್ ಗಿಲ್ 47, ನಾಯಕ ವಿರಾಟ್ ಕೊಹ್ಲಿ 36 ರನ್ ಗಳಿಸಿ ಉತ್ತಮ ಜೊತೆಯಾಟ ನೀಡಿದರು. ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ ಸ್ಪಿನ್ನರ್ ಅಕ್ಷರ್ ಪಟೇಲ್ ಇಂದೂ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 26 ಎಸೆತಗಳನ್ನು ಎದುರಿಸಿ 4 ಸಿಕ್ಸರ್, 3 ಬೌಂಡರಿಗಳೊಂದಿಗೆ ಅಜೇಯ 41 ರನ್ ಗಳಿಸಿದರು.
ಭಾರತ 7 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿ ಡಿಕ್ಲೇರ್ ಮಾಡಿದ ನಂತರ ನ್ಯೂಜಿಲೆಂಡ್ 540ರ ಬ್ರಹತ್ ಗುರಿಯನ್ನು ಬೆನ್ನಟ್ಟುವ ಹಂತದಲ್ಲಿ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಸೋಲಿನ ಭೀತಿಯಲ್ಲಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಹತ್ತಕ್ಕೆ ಹತ್ತು ವಿಕೆಟ್ ಪಡೆದ ಅಜಾಜ್ ಪಟೇಲ್ ದ್ವಿತೀಯ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದರು. ನ್ಯೂಜಿಲೆಂಡ್ ಬ್ಯಾಟಿಂಗ್ ಲೈನ್ ಅಪ್ ನ್ನು ಧೂಳೀಪಟ ಮಾಡಿದ ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದರು.