ಉಡುಪಿ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಇದೇ ರೀತಿಯ ವಾತಾವರಣ ಸೆಪ್ಟೆಂಬರ್ 12ರವರೆಗೆ ಇರಲಿದೆ.
ಸೆಪ್ಟೆಂಬರ್ 8ರಂದು 124.5 ಮಿಮಿ ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದ್ದು, ಸೆ. 9, 10 ಹಾಗೂ 12 ರಂದು 64.5 ಮಿಮಿ ಅಥವಾ ಅದಕ್ಕಿಂತ ಹೆಚ್ಚು ವರ್ಷಧಾರೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
